

ಬೆಂಗಳೂರು: ಈಗಾಗಲೆ ಐಸಿಸಿ ಟಿ20 ಮತ್ತು ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ ಶುಕ್ರವಾರದಿಂದ ನಡೆಯಲಿರುವ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ ಗೆದ್ದರೆ, ತವರಿನ ವಿಶ್ವಕಪ್ಗೆ ಮುನ್ನ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲೂ ನಂ. 1 ಪಟ್ಟಕ್ಕೇರಲಿದೆ.
ಸದ್ಯ ಪಾಕಿಸ್ತಾನ 115 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ (115) ಕೂಡ ಇಷ್ಟೇ ಅಂಕ ಹೊಂದಿದ್ದರೂ, ದಶಾಂಶ ಲೆಕ್ಕಾಚಾರದಲ್ಲಿ 2ನೇ ಸ್ಥಾನದಲ್ಲಿದೆ. ಆಸ್ಟ್ರೆಲಿಯಾ ತಂಡ (113) ಮೂರನೇ ಸ್ಥಾನದಲ್ಲಿದೆ. ಭಾರತ ತಂಡ ಆಸೀಸ್ ವಿರುದ್ಧ ಕನಿಷ್ಠ 2-1ರಿಂದ ಸರಣಿ ಗೆದ್ದರೂ, 116 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಲಿದೆ. ಇದರಿಂದ ತವರಿನ ವಿಶ್ವಕಪ್ನಲ್ಲಿ ವಿಶ್ವ ನಂ. 1 ತಂಡವಾಗಿ ಕಣಕ್ಕಿಳಿಯುವ ವಿಶೇಷ ಗೌರವ ಭಾರತ ತಂಡದ್ದಾಗಲಿದೆ.
ಇನ್ನು ಆಸ್ಟ್ರೆಲಿಯಾ ಸರಣಿ 3-0ಯಿಂದ ಕ್ಲೀನ್ಸ್ವೀಪ್ ಸಾಧಿಸಿದರಷ್ಟೇ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ ಹೊಂದಿದೆ. ಆಸೀಸ್ 2-1ರಿಂದಷ್ಟೇ ಸರಣಿ ಗೆದ್ದರೆ, ಪಾಕಿಸ್ತಾನ ನಂ. 1 ಪಟ್ಟವನ್ನು ರಕ್ಷಿಸಿಕೊಳ್ಳಲಿದೆ.
ಐಸಿಸಿ ರ್ಯಾಂಕಿಂಗ್ನಲ್ಲಿ ಭಾರತದ ಪ್ರಾಬಲ್ಯ
ಟೆಸ್ಟ್ ಟೀಮ್: ನಂ. 1
ಟಿ20 ಟೀಮ್: ನಂ. 1
ಏಕದಿನ ಟೀಮ್: ನಂ. 2
ಟೆಸ್ಟ್ ಬೌಲರ್: ಆರ್. ಅಶ್ವಿನ್ ನಂ. 1
ಏಕದಿನ ಬೌಲರ್: ಮೊ. ಸಿರಾಜ್ ನಂ.1
ಟಿ20 ಬ್ಯಾಟರ್: ಸೂರ್ಯಕುಮಾರ್ ನಂ. 1
ಟೆಸ್ಟ್ ಆಲ್ರೌಂಡರ್: ರವೀಂದ್ರ ಜಡೇಜಾ ನಂ.1
ಏಕದಿನ ಬ್ಯಾಟರ್: ಶುಭಮಾನ್ ಗಿಲ್ ನಂ. 2
ಟೆಸ್ಟ್ ಆಲ್ರೌಂಡರ್: ಆರ್. ಅಶ್ವಿನ್ ನಂ. 2
ಟಿ20 ಆಲ್ರೌಂಡರ್: ಹಾರ್ದಿಕ್ ಪಾಂಡ್ಯ ನಂ. 2