

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ಶನಿವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಪಂದ್ಯದ ಟಿಕೆಟ್ ಹೊಂದಿದ್ದವರು ಆ ದಿನ ಚೆನ್ನೈ ಮೆಟ್ರೋದಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ವಿಶೇಷ ಆಫರ್ಅನ್ನು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್ಸಿಎ) ಗುರುವಾರ ಪ್ರಕಟಿಸಿದೆ.
ಪಂದ್ಯದ ಟಿಕೆಟ್ ಇದ್ದವರಿಗೆ ಸ್ಟೇಡಿಯಂ ಇರುವ ಚೆಪಾಕ್ವರೆಗೆ ಮತ್ತು ಚೆಪಾಕ್ನಿಂದ ಮೆಟ್ರೋ ಪ್ರಯಾಣ ಉಚಿತವಾಗಿರುತ್ತದೆ. ಪಂದ್ಯದ ಟಿಕೆಟ್ಗಳು ಈಗಾಗಲೆ ಬಹುತೇಕ ಸೋಲ್ಡ್ಔಟ್ ಆಗಿವೆ.
ಪಂದ್ಯದ ವೇಳೆ ಮರೀನಾ ಬೀಚ್ ಪ್ರದೇಶದಲ್ಲಿ ಭಾರಿ ಸಂಚಾರಸಿಕ್ಕು (ಟ್ರಾಫಿಕ್ ಜಾಮ್) ಆಗುವುದನ್ನು ತಪ್ಪಿಸಲು ಚೆನ್ನೆ$ ಮೆಟ್ರೋ ರೈಲ್ ಸಂಸ್ಥೆ ಜತೆಗೂಡಿ ಟಿಎನ್ಸಿಎ, 2023ರ ಐಪಿಎಲ್ ವೇಳೆಯೂ ಇಂಥದ್ದೇ ಒಡಂಬಡಿಕೆ ಮಾಡಿಕೊಂಡಿತ್ತು.