ಭಾರತದ ಎದುರು ಮತ್ತೊಮ್ಮೆ ಮಣ್ಣುಮುಕ್ಕಿದೆ ಪಾಕಿಸ್ತಾನ; WCL ಟ್ರೋಫಿ ಮುಡಿಗೇರಿಸಿಕೊಂಡ ಯುವಿ ಪಡೆ

worldchampionshipoflegends
Published on

ಬರ್ಮಿಂಗ್​ಹ್ಯಾಮ್​: ಇಲ್ಲಿನ ಎಡ್ಜ್​ಬಾಸ್ಟನ್​ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ವರ್ಲ್ಡ್​​ ಚಾಂಪಿಯನ್​ಶಿಪ್​​​ ಆಫ್​ ಲೆಜೆಂಡ್ಸ್​ ಕ್ರಿಕೆಟ್​ ಟೂರ್ನಿಯಲ್ಲಿ ಯುವರಾಜ್​ ಸಿಂಗ್​ ನೇತೃತ್ವದ ಟೀಮ್​ ಇಂಡಿಯಾವು ಚಾಂಪಿಯನ್​ ಪಟ್ಟ ಅಲಂಕರಿಸಿದ್ದು, ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನ ಶೋಯೆಬ್​ ಮಲಿಕ್​ (41 ರನ್, 36 ಎಸೆತ, 1 ಬೌಂಡರಿ, 2 ಸಿಕ್ಸರ್), ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 156 ರನ್​ ಗಳಿಸಿತ್ತು. ಭಾರತದ ಪರ ರಾಹುಲ್​ ಶುಕ್ಲಾ (4-0-31-0), ಅನುರೀತ್​ ಸಿಂಗ್​ (4-0-43-3), ವಿನಯ್​ ಕುಮಾರ್​ (4-0-36-1), ಪವನ್​​​ ನೇಗಿ (4-0-24-1), ಹರ್ಭಜನ್​ ಸಿಂಗ್​ (1-0-8-0), ಇರ್ಫಾನ್​ ಪಠಾಣ್​ (3-0-12-1) ರನ್​ ನೀಢಿ ವಿಕೆಟ್​ ಪಡೆದಿದ್ದಾರೆ.

ಗುರಿ ಬೆನ್ನತ್ತಿದ್ದ ಭಾರತ ತಂಡವು ಆರಂಭಿಕ ಅಂಬಾಟಿ ರಾಯುಡು (50 ರನ್, 30 ಎಸೆತ, 5 ಬೌಂಡರಿ, 2 ಸಿಕ್ಸರ್), ಯೂಸುಫ್​ ಪಠಾಣ್​ (30 ರನ್​, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ ಯುವರಾಜ್​ ಸಿಂಗ್​ ನೇತೃತ್ವದ ಇಂಡಿಯಾ ಚಾಂಪಿಯನ್ಸ್​ ಗೆದ್ದು ಚಾಂಪಿಯನ್ಸ್​ ಪಟ್ಟ ಅಲಂಕರಿಸಿತ್ತು.

ಪಾಕಿಸ್ತಾನದ ಪರ ಆಮೀರ್​ ಯಾಮೀನ್ (3-0-29-2), ಸೋಹೈಲ್​ ತನ್ವೀರ್​ (3.1-0-28-0), ಸೋಹೈಲ್​ ಖಾನ್​ (2-0-18-0), ಶಾಹಿದ್​ ಅಫ್ರಿದಿ (2-0-15-0), ಸೈಯೀದ್​ ಅಜ್ಮಲ್​ (4-0-25-1), ವಹಾಬ್​ ರಿಯಾಜ್​ (3-0-22-1), ಶೋಯೆಬ್​ ಮಲಿಕ್​ (2-0-17-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net