

ಕೇಪ್ಟೌನ್: ಸೆಂಚೂರಿಯನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕೈಗೆತ್ತಿಕೊಂಡ ದಕ್ಷಿಣ ಆಫ್ರಿಕಾಕ್ಕೆ ಭಾರತದ ಬೌಲರ್ ಮೊಹಮ್ಮದ್ ಸಿರಾಜ್ ಆಘಾತ ನೀಡಿದರು. ಸಿರಾಜ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ಗೆ ಕ್ಯಾಚಿತ್ತು ಓಪನರ್ ಮಾರ್ಕ್ರಂ (5) ಔಟಾದರು. ಇದರೊಂದಿಗೆ ದಕ್ಷಿಣ ಆಫ್ರಿಕಾ 11 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು.
ಸೆಂಚುರಿಯನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಗೆ ಆಲೌಟ್ ಆಗಿತ್ತು. ಕೆ.ಎಲ್. ರಾಹುಲ್ (101; 137 ಎಸೆತಗಳಲ್ಲಿ 14 ಬೌಂಡರಿ, 4 ಸಿಕ್ಸರ್) ಶತಕ ಸಿಡಿಸಿದರು. ವಿರಾಟ್ ಕೊಹ್ಲಿ (38) ಮತ್ತು ಶ್ರೇಯಸ್ ಅಯ್ಯರ್ (31) ಮಿಂಚಿದರು. ದಕ್ಷಿಣ ಆಫ್ರಿಕಾದ ಬೌಲರ್‌ಗಳ ಪೈಕಿ ಕಗಿಸೊ ರಬಾಡ ಐದು ವಿಕೆಟ್ ಪಡೆದರು. ನಾಂಡ್ರಿ ಬರ್ಗರ್ ಮೂರು ವಿಕೆಟ್ ಪಡೆದರು. ಮಾರ್ಕೊ ಜಾನ್ಸೆನ್ ಮತ್ತು ಜೆರಾಲ್ಡ್ ಕೊಯೆಟ್ಜಿ ತಲಾ ಒಂದು ವಿಕೆಟ್ ಪಡೆದರು.
ಕೆ.ಎಲ್.ರಾಹುಲ್ ಶತಕ: ವಿಕೆಟ್ ಬೀಳುತ್ತಿದ್ದರೂ ಸತತವಾಗಿ ಆಡಿದ ಕೆಎಲ್ ರಾಹುಲ್ 133 ಎಸೆತಗಳಲ್ಲಿ ಶತಕ ಪೂರೈಸಿದರು. ಜೆರಾಲ್ಡ್ 66ನೇ ಓವರ್ ನಲ್ಲಿ ಸಿಕ್ಸರ್ ಬಾರಿಸಿ ಶತಕ ಗಳಿಸಿದರು.
ಆಟ ಆರಂಭ : ಕೊನೆಗೂ ವರುಣನ ಅಬ್ಬರದೊಂದಿಗೆ ಪಂದ್ಯ ಆರಂಭವಾಯಿತು. 208/8 ಓವರ್‌ನೈಟ್ ಸ್ಕೋರ್‌ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತ 245 ರನ್‌ಗಳಿಗೆ ಆಲೌಟ್ ಆಯಿತು.
ಮತ್ತೆ ಮಳೆ: ಮಳೆಯಿಂದಾಗಿ ಮೊದಲ ದಿನದ ಆಟದಲ್ಲಿ 31 ಓವರ್‌ಗಳು ಕಳೆದುಹೋದ ಕಾರಣ, ಎರಡನೇ ದಿನದ ಪಂದ್ಯ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಒಂದು ಗಂಟೆಗೆ ಪ್ರಾರಂಭವಾಗಲಿದೆ. ಆದರೆ.. ಎರಡನೇ ದಿನ ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿಯುತ್ತಿದೆ. ಇದರಿಂದಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ. ಮೊದಲ ದಿನ ಟೀಂ ಇಂಡಿಯಾ 59 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತ್ತು. ಕೆಎಲ್ ರಾಹುಲ್ (70) ಮತ್ತು ಸಿರಾಜ್ (0) ಕ್ರೀಸ್‌ನಲ್ಲಿದ್ದಾರೆ.