More

    ಟೆಸ್ಟ್​ ಕ್ರಿಕೆಟ್​ನಲ್ಲಿ ಕೊಹ್ಲಿ ದಾಖಲೆ: ಚೇಸ್​ಮಾಸ್ಟರ್ ಗಳಿಸಿದ ರನ್​ ಎಷ್ಟು?

    ಕೇಪ್​ಟೌನ್: ಟೀಂ ಇಂಡಿಯಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2019-25 ಅವಧಿಯಲ್ಲಿ ಭಾರತದ ತಂಡದ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಈ ಮೂಲಕ ವಿರಾಟ್ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 38 ರನ್ ಗಳಿಸುವ ಮೂಲಕ ಕೊಹ್ಲಿ ಹಿಟ್‌ಮ್ಯಾನ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

    ಇದನ್ನೂ ಓದಿ: ಜ.22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ತೆರೆಯಲಿವೆ ಹೈದರಾಬಾದ್​ನ 118 ಬಾಗಿಲು?
    ಡಬ್ಲ್ಯುಟಿಸಿ(ಟೆಸ್ಟ್​)ನಲ್ಲಿ ರೋಹಿತ್ 42 ಇನ್ನಿಂಗ್ಸ್‌ಗಳಲ್ಲಿ 2,097 ರನ್ ಗಳಿಸಿದ್ದರೆ, ಕೊಹ್ಲಿ 57 ಇನ್ನಿಂಗ್ಸ್‌ಗಳಲ್ಲಿ 2,101 ರನ್ ಗಳಿಸಿದ್ದರೆ. ನಯವಾಲ್ ಛತೇಶ್ವರ ಪೂಜಾರ 1,769 ರನ್ ಗಳಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಜಿಂಕ್ಯ ರಹಾನೆ (49 ಇನ್ನಿಂಗ್ಸ್‌ಗಳಲ್ಲಿ 1,589 ರನ್) ಮತ್ತು ರಿಷಬ್ ಪಂತ್ (41 ಇನ್ನಿಂಗ್ಸ್‌ಗಳಲ್ಲಿ 1,575) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

    ಡಬ್ಲ್ಯುಟಿಸಿಯಲ್ಲಿ ಟೀಂ ಇಂಡಿಯಾ ಉತ್ತಮ ದಾಖಲೆ ಹೊಂದಿದೆ. ಟೀಂ ಇಂಡಿಯಾ ಎರಡು ಬಾರಿ ಫೈನಲ್ ತಲುಪಿದ್ದು ಇಲ್ಲಿಯವರೆಗೂ ಯಾವ ತಂಡಕ್ಕೂ ಸಾಧ್ಯವಾಗಿಲ್ಲ. ಆದರೆ..ಅನಿರೀಕ್ಷಿತವಾಗಿ ಎರಡೂ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಎಡವಿದೆ.

    2021 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಕೊಹ್ಲಿ ಪಡೆಯನ್ನು ಸೋಲಿಸಿತು. 2023 ರಲ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಟೆಸ್ಟ್‌ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.

    ಶಸ್ತ್ರಚಿಕಿತ್ಸೆಗೆ ಒಳಗಾದ 82 ವರ್ಷದ ವೃದ್ಧೆಗೆ ಗುದ್ದು: ವೀಡಿಯೊ ವೈರಲ್ ನಂತರ ಚೀನಾ ವೈದ್ಯ ಅಮಾನತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts