More

    ಜ.22ಕ್ಕೆ ಅಯೋಧ್ಯೆ ರಾಮ ಮಂದಿರದಲ್ಲಿ ತೆರೆಯಲಿವೆ ಹೈದರಾಬಾದ್​ನ 118 ಬಾಗಿಲು?

    ಹೈದರಾಬಾದ್​: ಅಯೋಧ್ಯೆ ರಾಮಮಂದಿರಕ್ಕೆ ದ್ವಾರ ಮತ್ತು ಬಾಗಿಲುಗಳನ್ನು ಒದಗಿಸುವ ಮಹಾಭಾಗ್ಯ ಭಾಗ್ಯನಗರಿ(ಹೈದರಾಬಾದ್‌)ಗೆ ಒಲಿದಿತ್ತು. ಚಿನ್ನದ ಲೇಪನವಿರುವ 18 ಮುಖ್ಯ ದ್ವಾರಗಳು ಮತ್ತು 100 ಬಾಗಿಲುಗಳು ಇಲ್ಲಿ ತಯಾರಾಗಿ ಅಯೋಧ್ಯೆ ತಲುಪಿವೆ.

    ಇದನ್ನೂ ಓದಿ: ರಾಮಮಂದಿರದಲ್ಲಿ 12 ಗಂಟೆ ಕೆಲಸ, 1 ತಿಂಗಳಲ್ಲಿ ಕಂಬ ತಯಾರು…ಕೂಲಿ ಬಗ್ಗೆ ಕುಶಲಕರ್ಮಿಗಳು ಹೇಳಿದ್ದೇನು ಗೊತ್ತಾ?

    ತಮಿಳುನಾಡಿನ 70 ಅಧಿಕಾರಿಗಳ ತಂಡ ಈ ಹಿಂದೆ ದೇಶದ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಮರದ ಕಲಾಕೃತಿಗಳನ್ನು ಪರಿಶೀಲಿಸಿತ್ತು. ಇದೇ ತಂಡ ಎರಡು ದಿನ ತೆಲಂಗಾಣದ ಯಾದಗಿರಿಗುಟ್ಟ ದೇವಸ್ಥಾನವನ್ನು ಸೂಕ್ಷ್ಮವಾಗಿ ಪರಿಶೀಲಿಸಿತ್ತು. ದೇವಾಲಯದಲ್ಲಿನ ಮರದ ಕಲಾಕೃತಿಗಳು ಅವರನ್ನು ವಿಸ್ಮಯಗೊಳಿಸಿದ್ದು, ಮರ ಕೆತ್ತನೆ ಮಾಡಿದ ಕುಶಲ ಕರ್ಮಿಗಳ ಬಗ್ಗೆ ವಿಚಾರಣೆ ನಡೆಸಿದಾಗ, ಹೈದರಾಬಾದ್‌ನ ಬೋಯಿನ್‌ಪಲ್ಲಿಯಲ್ಲಿರುವ ಅನುರಾಧಾ ಟಿಂಬರ್ ಡಿಪೋದಲ್ಲಿ ತಯಾರಿಸಿರುವುದು ತಿಳಿದುಕೊಂಡಿದ್ದಾರೆ. ಕೂಡಲೇ ಟಿಂಬರ್ ಡಿಪೋಗೆ ಭೇಟಿ ನೀಡಿದ ತಂಡ ಮೇ ತಿಂಗಳಿನಲ್ಲಿ ದೇವಸ್ಥಾನದ ಬಾಗಿಲುಗಳ ತಯಾರಿಕೆಯ ಬೃಹತ್ ಯೋಜನೆ ಅವರ ಕೈಗೆ ಕೊಟ್ಟಿದ್ದಾರೆ. ಅಲ್ಲಿಂದ ಚಿನ್ನದ ಲೇಪನವಿರುವ 18 ಮುಖ್ಯ ದ್ವಾರಗಳು ಮತ್ತು 100 ಬಾಗಿಲುಗಳ ನಿರ್ಮಾಣ ಕಾರ್ಯ ಬಿರುಸಿನಿಂದ ಕೈಗೊಂಡಿದ್ದು, ಅಯೋಧ್ಯೆ ದೇಗುಲಕ್ಕೆ ತಲುಪಿ ಜೋಡಣೆ ಕಾರ್ಯವೂ ಮುಗಿದಿದೆ.

    ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, (ಭಾಗ್ಯನಗರಿ)ಹೈದರಾಬಾದ್​ನ ಬಾಗಿಲುಗಳು ಅಂದು ತೆರೆಯಲಿರುವುದು ಆಸ್ತೀಕ ಮಹಾಶಯರು ಹಾಗೂ ಭಕ್ತರಲ್ಲಿ ಸಂತಸ ಮೂಡಿಸಿದೆ.
    ಅನುರಾಧ ಟಿಂಬರ್ ಡಿಪೋ ಮುಖ್ಯಸ್ಥ ಚದಲವಾಡ ಶರತ್​ಬಾಬು ಮಾತನಾಡಿ, ಕೆಸಿಆರ್ ಸರ್ಕಾರ ಯದ್ರಾದ್ರಿ ದೇಗುಲ ಅಭಿವೃದ್ಧಿಪಡಿಸದಿದ್ರದರೆ ಅಯೋಧ್ಯೆ ರಾಮಮಂದಿರಕ್ಕೆ ಬಾಗಿಲು ಮಾಡಿಕೊಡುವ ಮಹಾಭಾಗ್ಯವನ್ನು ಭಾಗ್ಯನಗರ ಕಳೆದುಕೊಳ್ಳುತ್ತಿತ್ತು ಎನ್ನುತ್ತಾರೆ.

    ಯಾದಾದ್ರಿ ಮಾದರಿ: ದೇಶದೆಲ್ಲೆಡೆ ನಿರ್ಮಾಣವಾಗುತ್ತಿರುವ ಹೊಸ ದೇಗುಲಗಳಿಗೆ ಯಾದಾದ್ರಿ ಉದಾಹರಣೆಯಾಗಿದೆ. ತೆಲಂಗಾಣ ಸರ್ಕಾರ ಯಾದಾದ್ರಿಯನ್ನು ವಿಶ್ವದರ್ಜೆಯ ಕ್ಷೇತ್ರವನ್ನಾಗಿ ಮಾಡಿ ಕಣ್ಮನ ಸೆಳೆಯುವಂತೆ ಮಾಡಿದೆ. ದೇಗುಲದ ಪುನರ್ ನಿರ್ಮಾಣಕ್ಕಾಗಿ ಅಂದಿನ ಸಿಎಂ ಕೆಸಿಆರ್ ಅವರೇ ದೇಶದ ಹಲವು ಕಲಾ ಪ್ರಕಾರಗಳನ್ನು ಪರಿಶೀಲಿಸಿ ಅಧ್ಯಯನ ನಡೆಸಿದ್ದರು. ಕೊನೆಗೆ ಒಂದೇ ಕಡೆ ಭಕ್ತರಿಗೆ ಕಾಣುವಂತೆ ವಿವಿಧ ವಾಸ್ತು ವೈಭವಗಳನ್ನು ರೂಪಿಸಿ ದೇಶವನ್ನೇ ಬೆರಗುಗೊಳಿಸಿದರು. ಕೆಸಿಆರ್ ಮಾಡಿದ ಮಹತ್ತರವಾದ ವಿಚಾರ ಇಂದು ದೇಶಕ್ಕೆ ಮಾದರಿಯಾಗಿ ನಿಂತಿದೆ ಎಂದು ಪ್ರಶಂಸೆ ವ್ಯಕ್ತವಾಗುತ್ತಿದೆ.

    ದಟ್ಟ ಮಂಜಿನಿಂದ ಎಲ್ಲ ಮಾಯ…ವಿಮಾನ ಹಾರಾಟ, ರೈಲುಗಳ ಸಂಚಾರ ಗಂಟೆಗಟ್ಟಲೆ ವಿಳಂಬ; ಫೋಟೋಗಳಲ್ಲಿ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts