ದುಬೈನಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್​ಗಳ ಕಮಾಲ್​! ಆರಂಭದಲ್ಲೇ 3 ವಿಕೆಟ್​ ಕಳೆದುಕೊಂಡ ಕಿವೀಸ್ ಪರದಾಟ​ | IND vs NZ Final:

ವಿಜಯವಾಣಿ - 2025-03-09T160036.687
Published on

IND vs NZ Final:  ಇಂದು (ಮಾ.09) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್​ ಪಡೆ, ಭಾರತಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿದೆ. ಆಂತೆಯೇ ಬೌಲಿಂಗ್ ಮಾಡುತ್ತಿರುವ ಭಾರತ ಆರಂಭಿಕ ಹಂತದಲ್ಲೇ ಮಿಂಚಿದೆ.

ಟೀಮ್ ಇಂಡಿಯಾ ಬೌಲರ್​​ಗಳಿಗೆ ಬೀಸಾಡುವ ಭರದಲ್ಲಿ ತಮ್ಮ ಬಲಿಷ್ಠ ಬ್ಯಾಟಿಂಗ್​ ಲೈನ್​ ಅನ್ನೇ ಕಳೆದುಕೊಂಡ ನ್ಯೂಜಿಲೆಂಡ್, ಆರಂಭಿಕ ಹಂತದಲ್ಲೇ ತೀರ ಪರದಾಡುವಂತ ಪರಿಸ್ಥಿತಿ ತಲುಪಿದೆ. ತಂಡದ ಪರ ಟಾಪ್​ ಆರ್ಡರ್​ ಬ್ಯಾಟರ್​ಗಳಾದ ರಚಿನ್ ರವೀಂದ್ರ, ವಿಲ್​ ಯಂಗ್ ಮತ್ತು ಕೇನ್ ವಿಲಿಯಮ್​ಸನ್ ಆರಂಭದಲ್ಲೇ​ ಭಾರತದ ಸ್ಪಿನ್​ ದಾಳಿಗೆ ತತ್ತರಿಸಿ, ಪೆವಿಲಿಯನ್​ನತ್ತ ಮುಖ ಮಾಡಿದರು.

ಎರಡು ವಿಕೆಟ್​ಗಳನ್ನು ಕಬಳಿಸಿದ ಕುಲ್​ದೀಪ್​ ಯಾದವ್ ತಂಡದ ಪರ ಮಿಂಚಿದರೆ, ವರುಣ್​ ಚಕ್ರವರ್ತಿ 1 ವಿಕೆಟ್​ ಕಿತ್ತು ಮೈದಾನದಲ್ಲಿ ಸಂಭ್ರಮಿಸಿದರು. ಆರಂಭಿಕ ಹಂತದಲ್ಲೇ ಮೂರು ಬಹುಮುಖ್ಯ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬ್ಯಾಟಿಂಗ್​ ತಂತ್ರವನ್ನು ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net