1 ನಿಮಿಷ 313 ಗ್ರಾಂ ಸ್ಟ್ರಾಬೆರಿ ಹಣ್ಣು! ಗಿನ್ನಿಸ್​ ವಿಶ್ವ ದಾಖಲೆ ನಿರ್ಮಿಸಿದ ಲಿಯಾ ಶಟ್ಕೆವರ್​ | World Record

ವಿಜಯವಾಣಿ - 2025-03-09T153302.653
Published on

World Record: ಯಾವುದಾದರೂ ಒಂದು ವಿಷಯದಲ್ಲಿ ಇಲ್ಲಿಯವರೆಗೂ ಯಾರು ಮಾಡಿರದ ಸಾಧನೆ ಅಥವಾ ಊಹೆಗೂ ಮೀರಿ ಅಚ್ಚರಿ ಮೂಡಿಸುವಂತೆ ವಿಭಿನ್ನ ದಾಖಲೆ ಮಾಡಿದರೆ, ಅಂಥವರ ಹೆಸರು ಈ ಗಿನ್ನಿಸ್​ ವಿಶ್ವ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗುತ್ತೆ. ವಿಭಿನ್ನ, ವಿಶಿಷ್ಟ, ವೈಶಿಷ್ಟ್ಯತೆ ಎಂದೆನಿಸುವ ರೆಕಾರ್ಡ್​ಗಳು ಗಿನ್ನಿಸ್​ ವಿಶ್ವದಾಖಲೆಯನ್ನು ಸೇರಿಕೊಳ್ಳುತ್ತದೆ. ಸದ್ಯ ಈ ಸಾಲಿಗೆ ಯುಕೆ ದೇಶದ ಲಿಯಾ ಶಟ್ಕೆವರ್ ಹೆಸರು ಮತ್ತೊಮ್ಮೆ ಸೇರ್ಪಡೆಗೊಂಡಿದೆ.

ಅಸಲಿಗೆ ಇದು ಎರಡನೇ ಬಾರಿಗೆ ಎಂಬುದು ಗಮನಾರ್ಹ. ಗಿನ್ನಿಸ್ ವಿಶ್ವ ದಾಖಲೆಯಲ್ಲಿ ತನ್ನ ಹೆಸರನ್ನು ಬರೆದಿರುವ ಲಿಯಾ, ಈ ಬಾರಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಸ್ಟ್ರಾಬೆರಿಗಳನ್ನು ತಿನ್ನುವ ಮೂಲಕ ಸ್ಪರ್ಧೆಯಲ್ಲಿ ತಮ್ಮ ಹೆಸರನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ್ದಾರೆ. ಕೇವಲ 60 ಸೆಕೆಂಡುಗಳಲ್ಲಿ 313 ಗ್ರಾಂ ಸ್ಟ್ರಾಬೆರಿ ಹಣ್ಣನ್ನು ಈಕೆ ತಿಂದು ಮುಗಿಸಿದ್ದಾಳೆ ಎಂದು ಸಂಸ್ಥೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ದಾಖಲೆ ಮುರಿಯುವ ಪೈಪೋಟಿಯಲ್ಲಿ ಬಟ್ಟಲಿನಲ್ಲಿದ್ದ ಹಣ್ಣನ್ನು ಸಂಪೂರ್ಣವಾಗಿ ತಿಂದು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಇದು ನೋಡುಗರ ಹುಬ್ಬೇರಿಸಿದೆ.

1 ನಿಮಿಷದಲ್ಲಿ 313 ಸ್ಟ್ರಾಬೇರಿ ಹಣ್ಣನ್ನು ತಿಂದು ದಾಖಲೆಗೈದ ಲಿಯಾ ಸಾಧನೆಯನ್ನು ತನ್ನ ಜಾಲತಾಣದ ಖಾತೆಯಲ್ಲಿ ಗಿನ್ನಿಸ್​ ವಿಶ್ವ ದಾಖಲೆ ಸಂಸ್ಥೆ ಅಧಿಕೃತವಾಗಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ಅನೇಕರು ಲಿಯಾ ಸಾಧನೆಗೆ ಅಚ್ಚರಿ ವ್ಯಕ್ತಪಡಿಸಿದ್ದು, ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net