IND vs NZ Final: ಮೊದಲ ಇನ್ನಿಂಗ್ಸ್​ ಮುಕ್ತಾಯ; ಭಾರತಕ್ಕೆ 252 ರನ್​ ಸವಾಲು ನೀಡಿದ ಕಿವೀಸ್​

ವಿಜಯವಾಣಿ - 2025-03-09T180347.864
Published on

IND vs NZ Final: ಇಂದು (ಮಾ.09) ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕಿವೀಸ್​ ಪಡೆ, ಭಾರತಕ್ಕೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. ಆಂತೆಯೇ ಬ್ಯಾಟ್ ಮಾಡಿದ ಕಿವೀಸ್ ಪಡೆ 50 ಓವರ್​ ಅಂತ್ಯಕ್ಕೆ 7 ವಿಕೆಟ್​ ಕಳೆದುಕೊಂಡು 251 ರನ್​ ಕಲೆಹಾಕಿತು.

ಡ್ಯಾರಿ ಮಿಚೆಲ್​ (101 ಎಸೆತಕ್ಕೆ 63 ರನ್​) ಮತ್ತು ಮೈಕಲ್​ ಬ್ರೇಸ್​ವೆಲ್​ (40 ಎಸೆತಕ್ಕೆ 53) ಅವರ ಬಿರುಸಿನ ಬ್ಯಾಟಿಂಗ್ ತಂಡದ ಮೊತ್ತವನ್ನು​ 200ರ ಗಡಿದಾಟಿಸಲು ಸಹಾಯ ಮಾಡಿತು. 251 ರನ್​ ಕಲೆಹಾಕಿರುವ ನ್ಯೂಜಿಲೆಂಡ್​, ಭಾರತಕ್ಕೆ 252 ರನ್ ಗುರಿ ತಲುಪುವಂತೆ ಸವಾಲು ಹಾಕಿದೆ.

ಆರಂಭಿಕ ಹಂತದಲ್ಲೇ ಆಫಾತ ಅನುಭವಿಸಿದ ಕಿವೀಸ್​, ಸ್ಟಾರ್​ ಬ್ಯಾಟರ್​ಗಳನ್ನೇ ಕಳೆದುಕೊಂಡು ತೀರ ಪರದಾಡಿತು. ಇನ್ನು ನ್ಯೂಜಿಲೆಂಡ್​ ಬ್ಯಾಟರ್​ಗಳನ್ನು ದುಃಸ್ವಪ್ನದಂತೆ ಕಾಡಿದ ಟೀಮ್ ಇಂಡಿಯಾ ಸ್ಪಿನ್ನರ್​ಗಳಾದ ವರುಣ್ ಚಕ್ರವರ್ತಿ ಮತ್ತು ಕುಲ್​ದೀಪ್ ಯಾದವ್​ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್​ ಶಮಿ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.

ಕಿವೀಸ್ ನೀಡಿರುವ 252 ರನ್​ ಗುರಿಯನ್ನು ಚೇಸ್ ಮಾಡಲಿರುವ ರೋಹಿತ್ ಶರ್ಮ ಪಡೆ, ನ್ಯೂಜಿಲೆಂಡ್ ಬೌಲರ್​ಗಳಿಗೆ ಬೆವರಿಳಿಸುತ್ತಾರೋ ಅಥವಾ ಪರದಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net