

IND vs ENG: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನ 4ನೇ ದಿನದಾಟದ ಆರಂಭದಲ್ಲೇ ಟೀಮ್ ಇಂಡಿಯಾಗೆ ಭಾರೀ ಆಘಾತ ಎದುರಾಗಿದೆ. ಇಂಗ್ಲೆಂಡ್ ನೀಡಿರುವ ಬೃಹತ್ ಗುರಿಯನ್ನು ಬೆನ್ನತ್ತಲು ಅಖಾಡಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲದೆ, ಪೆವಿಲಿಯನ್ಗೆ ಮರಳಿದ್ದಾರೆ.
ಟೀಮ್ ಇಂಡಿಯಾ ಪರ ಓಪನಿಂಗ್ ಬಂದ ಯಶಸ್ವಿ ಜೈಸ್ವಾಲ್ ಮತ್ತು ಒನ್ ಡೌನ್ ಬ್ಯಾಟರ್ ಸಾಯಿ ಸುದರ್ಶನ್, ಶೂನ್ಯಕ್ಕೆ ಔಟಾಗಿರುವುದು ಸದ್ಯ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ. ಬೌಲಿಂಗ್ ದಾಳಿ ಆರಂಭಿಸಿದ ವೇಗಿ ಕ್ರಿಸ್ ವೋಕ್ಸ್, ಎರಡು ಬಹುಮುಖ್ಯ ವಿಕೆಟ್ ಕಬಳಿಸಿ ತಂಡದ ಪರ ಮಿಂಚಿದ್ದಾರೆ.
669 ರನ್‌ಗಳಿಗೆ ಆಲೌಟ್ ಆಗಿದ್ದ ಇಂಗ್ಲೆಂಡ್, ಭಾರತದ ಎರಡನೇ ಇನ್ನಿಂಗ್ಸ್‌ನ ಮೊದಲ ಓವರ್‌ನ ಅಂತ್ಯಕ್ಕೆ 311 ರನ್‌ಗಳ ಮುನ್ನಡೆಯನ್ನು ಮುಂದುವರಿಸಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಬಲವನ್ನು ಪ್ರದರ್ಶಿಸಿದೆ. 2 ವಿಕೆಟ್ ಪಡೆದ ವೋಕ್ಸ್, ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್ ವಿಕೆಟ್ ಪಡೆದು ಹ್ಯಾಟ್ರಿಕ್ ಸಂಭ್ರಮಿಸಲು ಮುಂದಾದರು. ಆದರೆ, ಅವರ ಪ್ರಯತ್ನ ವಿಫಲವಾಯಿತು. ಇನ್ನು ಗಿಲ್ ತೆಗೆದುಕೊಂಡ ಕೆಲವು ನಿರ್ಧಾರಗಳು ಮತ್ತು ನಾಯಕನಿಗೆ ನೀಡಬೇಕಾದ ಸಲಹೆಗಳನ್ನು ಗಂಭೀರ್ ಕೊಡದಿರುವುದು ಇದೀಗ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.