ಭಾರತ vs ಬಾಂಗ್ಲಾದೇಶ 4ನೇ ದಿನದ ಹೈಲೈಟ್ಸ್​ ಹೀಗಿದೆ…

cricket
Published on

ಬಾಂಗ್ಲಾದೇಶ: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಶನಿವಾರ ಮೂರು ವಿಕೆಟ್​ಗಳನ್ನು ಪಡೆದರು. ಬಾಂಗ್ಲಾದೇಶ ವಿರುದ್ಧದ ಆರಂಭಿಕ ಟೆಸ್ಟ್​ನಲ್ಲಿ ಭಾರತ ಸುಲಭದ ಗೆಲುವಿಗೆ ಹತ್ತಿರವಾಯಿತು. ನಾಲ್ಕನೇ ದಿನದ ಕೊನೆಯಲ್ಲಿ ಭಾರತ. ಬಾಂಗ್ಲಾ ತಂಡವನ್ನು ತಮ್ಮ ಎರಡನೇ ಇನ್ನಿಂಗ್ಸ್​ನಲ್ಲಿ 272/6 ಕ್ಕೆ ಸೋಲಿಸಿ ಬಿಟ್ಟಿತ್ತು.

ಮೊದಲಿಗೆ ಬಾಂಗ್ಲಾ ತಂಡ ಉತ್ತಮ ಪ್ರದರ್ಶನ ನೀಡತೊಡಗಿತ್ತು. ಆದರೆ ನಂತರ ಭಾರತದ ಬೌಲರ್​ಗಳು ಅಟ್ಯಾಕ್​ ಮೋಡ್​ಗೆ ಹೋದಾಗ ಬಾಂಗ್ಲಾ ಸೋತೇ ಬಿಟ್ಟಿತ್ತು. ದಿನದ ಕೊನೆಯಲ್ಲಿ ಬಾಂಗ್ಲಾ​ದೇಶಕ್ಕೆ ಗೆಲ್ಲಲು 241 ರನ್​ಗಳು ಬೇಕಾಗಿದ್ದವು.

ಝಾಕಿರ್ ಹಸನ್ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ಆತಿಥೇಯರ ಪಾಲಿಗೆ ಹೀರೋ ಆದರು. ಆದರೂ, ಶತಕ ಬಾರಿಸಿದ ಕೆಲವೇ ಕ್ಷಣಗಳಲ್ಲಿ, ಆರ್ ಅಶ್ವಿನ್‌ ಬೌಲಿಂಗ್​ಗೆ ಬಲಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net