ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಕ್ರಮ ಬಾಂಗ್ಲಾ ವಲಸಿಗರು! ದಾಳಿ ಮಾಡಿ ಬಂಧಿಸಿದ ಸಿಸಿಬಿ…

bangla
Published on

ಬೆಂಗಳೂರು: ಇದೀಗ ಸಿಸಿಬಿ ಪೊಲೀಸರಿಂದ ಎರಡು ಠಾಣಾ ವ್ಯಾಪ್ತಿಯಲ್ಲಿ ದಾಳಿ ದಾಳಿ ನಡೆದಿದ್ದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದಾರೆ.

ಕೆಂಗೇರಿ ಹಾಗೂ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳು ಬಾಂಗ್ಲಾದಿಂದ ಅಕ್ರಮವಾಗಿ ಬಂದು ನೆಲೆಸಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ತನ್ವೀರ್ ಮಂಡಲ್,ಅಖ್ತರ್ ಮಂಡಲ್, ಇಲಾಹಿ,ಬಿಸ್ತ್ವಿ ಸೇರಿದಂತೆ 12 ಮಂದಿಯನ್ನು ಬಂಧಿಸಿದ್ದಾರೆ.

ಇವರು ಕೆಂಗೇರಿಯ ವಿನಾಯಕನಗರ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ಬಾಡಿಗೆ ಮನೆಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಅಕ್ರಮ ವಲಸಿಗರು, ಯುವತಿಯರನ್ನ ಬೆಂಗಳೂರಿಗೆ ಅಕ್ರಮವಾಗಿ ಕರೆತಂದು ವೇಶ್ಯಾವಾಟಿಕೆ ಮಾಡುತ್ತಿದ್ದರು. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ 12 ಆರೋಪಿಗಳ ಬಳಿಯಲ್ಲಿ ಭಾರತದ ಅಧಾರ್ ಕಾರ್ಡ್ ಗಳು ಪತ್ತೆ ಆಗಿವೆ. ಅದಲ್ಲದೆ ಆರೋಪಿಗಳ ಬಳಿ ಬಾಂಗ್ಲಾ ಕರೆನ್ಸಿ, ಬಾಂಗ್ಲಾದಲ್ಲಿ ಕೋವಿಡ್ ವ್ಯಾಕ್ಸಿನೇಷನ್‌ ಪಡೆದಿರುವ ದಾಖಲೆ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net