IND vs BAN: ಶತಕ ಬಾರಿಸಿದ ಹೃದಯ್​ ಏಕಾಂಗಿ ಹೋರಾಟ! 228ಕ್ಕೆ ಬಾಂಗ್ಲಾ ಆಲ್​ಔಟ್​

ವಿಜಯವಾಣಿ - 2025-02-20T180941.509
Published on

IND vs BAN: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್​ ಅಂತ್ಯಕ್ಕೆ ಬಾಂಗ್ಲಾದೇಶ ಆಲ್​ಔಟ್​ ಆಗುವ ಮೂಲಕ ಕೇವಲ 228 ರನ್​​ ಗಳಿಸಲಷ್ಟೇ ಶಕ್ತವಾಯಿತು.

ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪಡೆ, 49.4 ಓವರ್ ಅಂತ್ಯಕ್ಕೆ 228 ರನ್​ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾ ಬ್ಯಾಟರ್​ಗಳನ್ನು ಕಾಡಿದ ಭಾರತದ ಬೌಲರ್​ಗಳ ಪೈಕಿ ಮೊಹಮ್ಮದ್ ಶಮಿ 5 ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ದಾಖಲೆ ಬರೆದಿದ್ದಾರೆ. ಶಮಿ ನಂತರದಲ್ಲಿ ಹರ್ಷಿತ್​ ರಾಣಾ 3 ವಿಕೆಟ್​ ಕಬಳಿಸಿದರೆ, ಅಕ್ಸರ್​ ಪಟೇಲ್​ 2 ವಿಕೆಟ್ ಪಡೆದು ತಂಡದ ಪರ ಮಿಂಚಿದರು.

ಬಾಂಗ್ಲಾ ಪರ ತೋಹಿದ್ ಹೃದಯ್ ಆಕರ್ಷಕ ಶತಕ ( 100 ರನ್​, 115 ಎಸೆತ) ಬಾರಿಸುವ ಮೂಲಕ ತಂಡದ ಪರ ಏಕಾಂಗಿ ಹೋರಾಟ ನಡೆಸಿದರು. ಹೃದಯ್​ ಮತ್ತು ಜೆಕರ್​ ಅಲಿ 68 (114 ಎಸೆತ) ಅಬ್ಬರದ ಬ್ಯಾಟಿಂಗ್​, ತಂಡದ ಸ್ಕೋರ್​ ಅನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. ಬಾಂಗ್ಲಾ ನೀಡಿರುವ 229 ರನ್​ ಬೆನ್ನಟ್ಟಲಿರುವ ಭಾರತ, ಹೇಗೆ ಪ್ರದರ್ಶನ ನೀಡಲಿದೆ? ಎಷ್ಟು ವೇಗವಾಗಿ ಪಂದ್ಯವನ್ನು ಗೆಲುವಿನ ಮೂಲಕ ಮುಗಿಸಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net