ಐಪಿಎಲ್​ ಅಂಕಪಟ್ಟಿಯಲ್ಲಿ ನಂ. 2 ಸ್ಥಾನ ಯಾರಿಗೆ? ಕುತೂಹಲ ಕೆರಳಿಸಿದೆ ತ್ರಿಕೋನ ಸ್ಪರ್ಧೆ!

web play off 2
Published on

ಬೆಂಗಳೂರು: ರಾಜಸ್ಥಾನ ತಂಡ ಪಂಜಾಬ್​ ವಿರುದ್ಧ ಸೋಲು ಕಾಣುವುದರೊಂದಿಗೆ ಕೆಕೆಆರ್​ಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಖಚಿತಗೊಂಡಿದೆ. ಆದರೆ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಕೆಕೆಆರ್​ಗೆ ಎದುರಾಳಿಯಾಗುವ ಅಂಕಪಟ್ಟಿಯ ದ್ವಿತೀಯ ಸ್ಥಾನಿ ತಂಡ ಯಾವುದು ಎಂಬ ಕುತೂಹಲ ಇನ್ನೂ ಉಳಿದಿದೆ. ರಾಜಸ್ಥಾನ ಜತೆಗೆ ಸನ್​ರೈಸರ್ಸ್​, ಸಿಎಸ್​ಕೆ ತಂಡಗಳಿಗೂ ಈ ಸ್ಥಾನ ಪಡೆಯುವ ಅವಕಾಶವಿದೆ.

ರಾಜಸ್ಥಾನ ತಂಡ ಭಾನುವಾರ ತನ್ನ ಕೊನೇ ಲೀಗ್​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಗೆದ್ದರೆ 2ನೇ ಸ್ಥಾನಕ್ಕೇರಲಿದೆ. ಆದರೆ ರಾಜಸ್ಥಾನ ತನ್ನ ಕೊನೇ ಪಂದ್ಯದಲ್ಲಿ ಸೋತರೆ, ಸನ್​ರೈಸರ್ಸ್​ ತಂಡ ತನ್ನ ಕೊನೇ ಪಂದ್ಯದಲ್ಲಿ ಗೆದ್ದು 2ನೇ ಸ್ಥಾನಕ್ಕೇರಬಹುದಾಗಿದೆ. ರಾಜಸ್ಥಾನ ಮತ್ತು ಸನ್​ರೈಸರ್ಸ್​ ಎರಡೂ ತಮ್ಮ ಕೊನೇ ಪಂದ್ಯದಲ್ಲಿ ಸೋತರೆ ಆಗ ಸಿಎಸ್​ಕೆ ತಂಡ ಆರ್​ಸಿಬಿ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಬಹುದಾಗಿದೆ.

ಪ್ಲೇಆಫ್​ 4ನೇ ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಫೈಟ್​

ಸನ್​ರೈಸರ್ಸ್​ 3ನೇ ತಂಡವಾಗಿ ಪ್ಲೇಆಫ್​​ಗೆ ಏರಿರುವುದರಿಂದ ಬಾಕಿ ಉಳಿದ ಇನ್ನೊಂದು ಸ್ಥಾನಕ್ಕೆ ಸಿಎಸ್​ಕೆ-ಆರ್​ಸಿಬಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಶನಿವಾರ ಆರ್​ಸಿಬಿ 18 ರನ್​ಗಳಿಂದ (200 ರನ್​ ಗಳಿಸಿ) ಗೆದ್ದರೆ ರನ್​ರೇಟ್​ನಲ್ಲಿ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ ಪ್ಲೇಆಫ್​​ಗೇರುತ್ತದೆ. ಇಲ್ಲದಿದ್ದರೆ ಸಿಎಸ್​ಕೆ ಸೋತರೂ ಪ್ಲೇಆಫ್​ಗೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net