ಸಂಭ್ರಮದ ನಡುವೆಯೇ ಟೀಮ್​ ಇಂಡಿಯಾಗೆ ಆಘಾತ; ಆಸ್ಟ್ರೇಲಿಯಾದಿಂದ ದಿಢೀರ್​ ತವರಿಗೆ ಮರಳಿದ Gautam Gambhir

gautam gambhir
Published on

ನವದೆಹಲಿ: ನವೆಂಬರ್​ 22ರಿಂದ ಆರಂಭವಾಗಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ (Border-Gavaskar Trophy) ಭಾರತ (Team India) ಶುಭಾರಂಭ ಕಂಡಿದ್ದು, ಮೊದಲ ಪಂದ್ಯದಲ್ಲಿ 295 ರನ್​ಗಳ ಭರ್ಜರಿ ಜಯಗಳಿಸಿದೆ. ನ್ಯೂಜಿಲೆಂಡ್​​ ವಿರುದ್ಧದ ಸರಣಿ ಸೋಲಿನ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿರುವ ಭಾರತ ತಂಡ ಗೆಲುವಿನ ಸಂಭ್ರಮದಲ್ಲಿರುವ ನಡುವೆಯೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಟೀಮ್​ ಇಂಡಿಯಾ ಕೋಚ್ (Team India Coach) ಗೌತಮ್ ಗಂಭೀರ್ (Gautam Gambhir) ಅವರು ಆಸ್ಟ್ರೇಲಿಯಾದಿಂದ ದಿಢೀರ್ ತವರಿಗೆ ವಾಪಸ್ ಆಗಿದ್ದಾರೆ.

ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸುತ್ತಿದ್ದಂತೆಯೇ, ವೈಯಕ್ತಿಕ ಕಾರಣ ನೀಡಿ ಗಂಭೀರ್ (Gautam Gambhir) ಭಾರತದತ್ತ ಮುಖ ಮಾಡಿದ್ದಾರೆ. ಅಡಿಲೇಡ್​ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಗೌತಮ್​ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

2025ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​ ದೃಷ್ಟಿಯಿಂದ ಈ ಸರಣಿ ಭಾರತಕ್ಕೆ ಬಹುಮುಖ್ಯವಾಗಿದ್ದು, ಇದರಲ್ಲಿ ಗೆಲುವು ಬಹುಮುಖ್ಯವಾಗಿದೆ. ಇದೀಗ ಮೊದಲ ಟೆಸ್ಟ್​ ಸಂಭ್ರಮದ ನಡುವೆಯೇ ಗೌತಮ್​ ಗಂಭೀರ್​ (Gautam Gambhir) ತವರಿಗೆ ವಾಪಸ್​ ಆಗಿರುವುದು ಮ್ಯಾನೇಜ್​ಮೆಂಟ್​ ಅನ್ನು ಚಿಂತೆಗೆ ದೂಡಿದ್ದು, ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಡಿಸೆಂಬರ್ 6ರಂದು  ಅಇಡಲೇಡ್​ನಲ್ಲಿ ಎರಡನೇ ಟೆಸ್ಟ್​ ಪಂದ್ಯ ನಡೆಯಲಿದ್ದು, ಗಂಭೀರ್ ಅಷ್ಟರೊಳಗೆ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ. ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಆರಂಭಿಕ ಶುಭಮನ್ ಗಿಲ್​ ಎರಡನೇ ಪಂದ್ಯಕ್ಕೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಷ್ಟರೊಳಗೆ ಗೌತಮ್​ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ (BCCI) ಹಿರಿಯ ಅಧಿಕಾರಿಯೊಬ್ಬರು, ವೈಯಕ್ತಿಕ ಕಾರಣಗಳನ್ನು ನೀಡಿ ಗಂಭೀರ್ ಅವರು ತವರಿಗೆ ಮರಳಲಿದ್ದು, ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬಿಸಿಸಿಐ ಅವರ ಮನವಿಯನ್ನು ಸ್ವೀಕರಿಸಿದ್ದು , ಅವರಿಗೆ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಬಿಸಿಸಿಐನ (BCCI) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವೆ ನಡೆಯಲಿರುವ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22ಕ್ಕೆ ಆರಂಭವಾಗಿದ್ದು, ಜನವರಿ 7 ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net