ಫೀಲ್ಡಿಂಗ್​ನಲ್ಲಿ ಚಿನ್ನದ ಪದಕ ಗೆದ್ದ ಸಿರಾಜ್​; ಸೂರ್ಯಕುಮಾರ್​ಗೆ ಅವಳಿ ಸಂಭ್ರಮ

siraj surya web
Published on

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಕೊನೇ ಪಂದ್ಯದಲ್ಲಿ 106 ರನ್​ಗಳಿಂದ ಗೆಲ್ಲುವ ಮೂಲಕ ಭಾರತ 1-1 ಸಮಬಲ ಸಾಧಿಸಿತು. ಟೀಮ್​ ಇಂಡಿಯಾ ಪರ ಸರಣಿಯ ಅತ್ಯುತ್ತಮ ಫೀಲ್ಡರ್​ ಆಗಿ ವೇಗಿ ಮೊಹಮದ್​ ಸಿರಾಜ್​ ಆಯ್ಕೆಯಾಗಿದ್ದು, ಅಂತಿಮ ಪಂದ್ಯದ ಬಳಿಕ ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​, ಸಿರಾಜ್​ಗೆ ಚಿನ್ನದ ಪದಕವನ್ನು ನೀಡಿದರು.

ಕಳೆದ ವಿಶ್ವಕಪ್​ನಲ್ಲಿ ಪ್ರತಿ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡರ್​ಗೆ ನೀಡಲಾಗುತ್ತಿದ್ದ ಚಿನ್ನದ ಪದಕವನ್ನು ಈಗ "ಇಂಪ್ಯಾಕ್ಟ್​ ಫೀಲ್ಡರ್​ ಆ್​ ದಿ ಸಿರೀಸ್​' ಆಗಿ ನೀಡಲಾಗುತ್ತಿದೆ. ಅಂತಿಮ ಪಂದ್ಯದಲ್ಲಿ ಆರಂಭಿಕ ರೀಜಾ ಹೆಂಡ್ರಿಕ್ಸ್​ರನ್ನು ಡೈರೆಕ್ಟ್​ ಹಿಟ್​ ರನೌಟ್​ ಮಾಡುವ ಮೂಲಕ ಸಿರಾಜ್​ ಹರಿಣಗಳ ಕುಸಿತಕ್ಕೆ ನಾಂದಿ ಹಾಡಿದ್ದರು.

ನಂತರ ಕುಲದೀಪ್​ ಯಾದವ್​ (17ಕ್ಕೆ 5) ಸ್ಪಿನ್​ ಕಡಿವಾಣ ಹಾಕಿದ್ದರು. ಶತಕವೀರ ನಾಯಕ ಸೂರ್ಯಕುಮಾರ್​ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net