

ನವದೆಹಲಿ: ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ 2ರಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿದ್ದರೆ, ಸಿಡ್ನಿ ಟೆಸ್ಟ್‌ನಲ್ಲಿ ಶತಕ, ಅರ್ಧಶತಕ ಸಿಡಿಸಿದ ಸ್ಟೀವನ್ ಸ್ಮಿತ್ 3ರಿಂದ 2ನೇ ಸ್ಥಾನಕ್ಕೇರಿದ್ದಾರೆ.
ಚೇತೇಶ್ವರ ಪೂಜಾರ 2 ಸ್ಥಾನ ಏರಿಕೆ ಕಂಡು 8ನೇ ಸ್ಥಾನಕ್ಕೇರಿದ್ದರೆ, ಹಂಗಾಮಿ ನಾಯಕ ಅಜಿಂಕ್ಯ ರಹಾನೆ 1 ಸ್ಥಾನ ಕುಸಿದು 7ನೇ ಸ್ಥಾನಕ್ಕಿಳಿದಿದ್ದಾರೆ. ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿರುವ ಕೊಹ್ಲಿ ಅಂಕ 870ರಲ್ಲೇ ಉಳಿದಿದ್ದರೆ, ಸ್ಟೀವನ್ ಸ್ಮಿತ್ 900 ಅಂಕದೊಂದಿಗೆ ಅಗ್ರಸ್ಥಾನಿ ಕೇನ್ ವಿಲಿಯಮ್ಸನ್‌ಗಿಂತ (919) ಅಲ್ಪ ಅಂತರದಲ್ಲಿ ಹಿಂದಿದ್ದಾರೆ.
ಇದನ್ನೂ ಓದಿ: ಸಾನಿಯಾ ಮಿರ್ಜಾ ಸಾಧನೆಯ ಹಾದಿಯಲ್ಲಿ ಅಂಕಿತಾ ರೈನಾ
2ನೇ ಇನಿಂಗ್ಸ್‌ನಲ್ಲಿ 97 ರನ್ ಸಿಡಿಸಿದ ರಿಷಭ್ ಪಂತ್ 19 ಸ್ಥಾನ ಮೇಲೇರಿ 26ನೇ ಸ್ಥಾನ ಗಳಿಸಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಅಶ್ವಿನ್ 2 ಸ್ಥಾನ ಕುಸಿದು 9ನೇ ಸ್ಥಾನಕ್ಕಿಳಿದಿದ್ದರೆ, ಜಸ್‌ಪ್ರೀತ್ ಬುಮ್ರಾ 1 ಸ್ಥಾನ ಕುಸಿದು 10ನೇ ಸ್ಥಾನಕ್ಕಿಳಿದಿದ್ದಾರೆ.