ಶ್ರೇಯಸ್​ ಅಯ್ಯರ್​ಗೆ ಐಸಿಸಿ ಮಾಸಿಕ ಪ್ರಶಸ್ತಿ; ಸತತ 2ನೇ ಬಾರಿ ಭಾರತೀಯರಿಗೆ ಗರಿ!

web icc srys
Published on

ದುಬೈ: ಟೀಮ್​ ಇಂಡಿಯಾ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಐಸಿಸಿಯ ಮಾರ್ಚ್​ ತಿಂಗಳ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ತೋರಿದ ಅತ್ಯುತ್ತಮ ನಿರ್ವಹಣೆಗಾಗಿ ಅವರಿಗೆ ಈ ಪ್ರಶಸ್ತಿ ಒಲಿದಿದೆ.

ಮಾರ್ಚ್​ನಲ್ಲಿ ಅವರು 3 ಪಂದ್ಯಗಳಲ್ಲಿ 172 ರನ್​ ಸಿಡಿಸಿದ್ದರು. ಈ ಪೈಕಿ ಸೆಮೀಸ್​ನಲ್ಲಿ ಆಸೀಸ್​ ಎದುರು 45 ಎಸೆತಗಳಲ್ಲಿ 62 ರನ್​ ಸಿಡಿಸಿ ಮಿಂಚಿದ್ದರು. ನಂತರ ಫೈನಲ್​ನಲ್ಲಿ ನ್ಯೂಜಿಲೆಂಡ್​ ಎದುರು ಅಮೂಲ್ಯ 48 ರನ್​ ಬಾರಿಸಿದ್ದರು. ನ್ಯೂಜಿಲೆಂಡ್​ನ ಜೇಕಬ್​ ಡಫಿ ಮತ್ತು ರಚಿನ್​ ರವೀಂದ್ರ ಅವರನ್ನು ಹಿಂದಿಕ್ಕಿ ಶ್ರೇಯಸ್​ ಈ ಸಾಧನೆ ಮಾಡಿದ್ದಾರೆ.

"ಈ ಪ್ರಶಸ್ತಿ ದೊಡ್ಡ ಗೌರವವಾಗಿದೆ. ಭಾರತ ತಂಡ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದ ತಿಂಗಳ ನಿರ್ವಹಣೆಗಾಗಿಯೇ ಈ ಪ್ರಶಸ್ತಿ ಒಲಿದಿರುವುದು ವಿಶೇಷ ಮನ್ನಣೆ ಎನಿಸಿದೆ. ಭಾರತದ ಯಶಸ್ಸಿಗೆ ಕೊಡುಗೆ ನೀಡುವುದು ಎಲ್ಲರ ಕನಸು. ನನ್ನ ಸಹ&ಆಟಗಾರರು, ತರಬೇತಿ ಸಿಬ್ಬಂದಿಯ ಬೆಂಬಲಕ್ಕೂ ನಾನು ಋಣಿಯಾಗಿರುವೆ' ಎಂದು 30 ವರ್ಷದ ಶ್ರೇಯಸ್​ ಹೇಳಿದ್ದಾರೆ. ಫೆಬ್ರವರಿಯಲ್ಲಿ ಶುಭಮಾನ್​ ಗಿಲ್​ ಈ ಪ್ರಶಸ್ತಿ ಗೆದ್ದಿದ್ದರು. ಇದರಿಂದ ಸತತ 2 ತಿಂಗಳು ಭಾರತೀಯರೇ ಈ ಪ್ರಶಸ್ತಿ ಗೆದ್ದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net