ಡೆಂಘೆಯಿಂದ ಚೇತರಿಸಿಕೊಂಡ ಬೆನ್ನಲ್ಲೇ ಶುಭಮಾನ್​ ಗಿಲ್​ಗೆ ಒಲಿಯಿತು ಐಸಿಸಿಯ ವಿಶೇಷ ಪ್ರಶಸ್ತಿ!

gill web
Published on

ನವದೆಹಲಿ: ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮಾನ್​ ಗಿಲ್​ ಐಸಿಸಿಯ ಸೆಪ್ಟೆಂಬರ್​ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ತಿಂಗಳು ಏಷ್ಯಾಕಪ್​ ಮತ್ತು ಆಸೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ 80ರ ಸರಾಸರಿಯಲ್ಲಿ ಒಟ್ಟಾರೆ 480 ರನ್​ ಸಿಡಿಸಿದ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

ದೇಶಬಾಂಧವ ವೇಗಿ ಮೊಹಮದ್​ ಸಿರಾಜ್​ ಮತ್ತು ಇಂಗ್ಲೆಂಡ್​ನ ಡೇವಿಡ್​ ಮಲಾನ್​ರನ್ನು ಹಿಂದಿಕ್ಕಿ ಗಿಲ್​ ಪ್ರಶಸ್ತಿ ಒಲಿಸಿಕೊಂಡಿದ್ದಾರೆ. ಗಿಲ್​ ಈ ಪ್ರಶಸ್ತಿಯನ್ನು 2 ಬಾರಿ ಪಡೆದುಕೊಂಡಿರುವ ಭಾರತದ ಮೊದಲ ಆಟಗಾರರಾಗಿದ್ದಾರೆ. ಈ ಮುನ್ನ ಜನವರಿಯಲ್ಲೂ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net