ಐಸಿಸಿ ಮಾಸಿಕ ಪ್ರಶಸ್ತಿ ರೇಸ್​ನಲ್ಲಿ ಶುಭಮಾನ್​ ಗಿಲ್​, ಸಿರಾಜ್​

gill siraj icc web
Published on

ನವದೆಹಲಿ: ಭಾರತದ ಆರಂಭಿಕ ಶುಭಮಾನ್​ ಗಿಲ್​ ಮತ್ತು ವೇಗಿ ಮೊಹಮದ್​ ಸಿರಾಜ್​ ಐಸಿಸಿಯ ಸೆಪ್ಟೆಂಬರ್​ ತಿಂಗಳ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಇಂಗ್ಲೆಂಡ್​ನ ಡೇವಿಡ್​ ಮಲಾನ್​ ಈ ಪ್ರಶಸ್ತಿ ರೇಸ್​ನಲ್ಲಿರುವ ಮೂರನೇ ಆಟಗಾರರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಶ್ರೀಲಂಕಾದ ಚಾಮರಿ ಅಟಪಟ್ಟು ಮತ್ತು ದಣ ಆಫ್ರಿಕಾದ ನಾಡಿನ್​ ಡಿ ಕ್ಲೆರ್ಕ್​, ಲೌರಾ ವೊಲ್ವಾರ್ಡ್​ ನಾಮನಿರ್ದೇಶನಗೊಂಡಿದ್ದಾರೆ.

ಗಿಲ್​ ಸೆಪ್ಟೆಂಬರ್​ನಲ್ಲಿ ಏಕದಿನ ಕ್ರಿಕೆಟ್​ನಲ್ಲಿ 80ರ ಸರಾಸರಿಯಲ್ಲಿ 480 ರನ್​ ಬಾರಿಸಿದ್ದಾರೆ. ಏಷ್ಯಾಕಪ್​ ಮತ್ತು ತವರಿನ ಆಸ್ಟ್ರೆಲಿಯಾ ವಿರುದ್ಧದ ಸರಣಿಗಳಲ್ಲಿ ಅವರು ಈ ರನ್​ ಸಿಡಿಸಿದ್ದಾರೆ. ಸಿರಾಜ್​ ಏಷ್ಯಾಕಪ್ ಫೈನಲ್​ನಲ್ಲಿ 6 ವಿಕೆಟ್​ ಕಬಳಿಸಿ ಮಿಂಚಿದ್ದರು. ಸೆಪ್ಟೆಂಬರ್​ನಲ್ಲಿ 17.27ರ ಸರಾಸರಿಯಲ್ಲಿ ಒಟ್ಟಾರೆ 11 ವಿಕೆಟ್​ ಕಬಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net