ಭಾರತವನ್ನು ಸೋಲಿಸಿ ಪ್ರತೀಕಾರ ತಿರಿಸಿಕೊಳ್ಳಿ ಎಂದು ಪಾಕ್​ ತಂಡಕ್ಕೆ ಮನವಿ ಮಾಡಿದ ಶೋಯೆಬ್​ ಅಖ್ತರ್​ | ICC Champions Trophy 2025

ICC Champions Trophy 2025
Published on

ನವದೆಹಲಿ: ಐಸಿಸಿ 2025ರ ಚಾಂಪಿಯನ್(ICC Champions Trophy 2025)​ ಟ್ರೋಫಿ ಆತಿಥ್ಯ ವಿವಾದದ ಮಧ್ಯೆ ಪಾಕಿಸ್ತಾನ ಆಟಗಾರ ಶೋಯೆಬ್​ ಅಖ್ತರ್​ ಅವರು ತಮ್ಮ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಹೋಗಿ ಅಲ್ಲಿ ಸೋಲಿಸುವಂತೆ ಕೇಳಿಕೊಂಡಿದ್ದಾರೆ.

2025ರ ಚಾಂಪಿಯನ್ಸ್​ ಟ್ರೋಫಿಯನ್ನು ಪಾಕಿಸ್ತಾನ ಅತಿಥ್ಯವಹಿಸಿದರೆ. ಭಾರತ ತಂಡ ಅಲ್ಲಿ ಆಡಲು ತೆರಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ಈ ಬಾರಿಯ ಟ್ರೋಫಿಗಾಗಿ ಹೈಬ್ರಿಡ್​ ಮಾದರಿಯಲ್ಲಿ ನಡೆಯುತ್ತಿದೆ ಎಂದು ವರದಿಯಾಗಿದೆ. ಅಲ್ಲದೇ, ಈ ಹೈಬ್ರಿಡ್​ ಮಾದರಿಯಲ್ಲಿ ನಡೆಯಲು ಒಂದು ವೇಳೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಒಪ್ಪಿದರೆ ಭವಿಷ್ಯದಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಟ್ರೋಫಿಗಳಲ್ಲಿ ಆಟವಾಡಲು ಭಾಗವಹಿಸುವುದಿಲ್ಲ ಎಂದು ಇನ್ನು ಕೆಲ ವರದಿಗಳು ಉಲ್ಲೇಖಿಸಿವೆ. ಭಾರತ ಮತ್ತು ಪಾಕಿಸ್ತಾನದ ಈ ಗೊಂದಲದ ಬಗ್ಗೆ ಅಂತರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಯಾವುದೇ ಪ್ರಕಟಣೆ ಹೊರಡಿಸಿಲ್ಲ.

ಇದೆಲ್ಲಾದರ ನಡುವೆ ಶೋಯೆಬ್​ ಅಖ್ತರ್​ ಇಂತಹ ಹೇಳಿಕೆಯನ್ನು ನೀಡಿದ್ದಾರೆ. ''ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ನಿಲುವು ಒಂದು ವೇಳೆ ಇದೇ ಅದರೆ ನಾನು ಇದನ್ನು ಒಪ್ಪುವೆ ಎಂದಿದ್ದಾರೆ. ಪಾಕಿಸ್ತಾದ ನಿಲುವು ಸಮಂಜಸವಾಗಿದೆ. ಅವರು ಬಲವಾದ ಸ್ಥಾನವನ್ನು ಕಾಯ್ದಕೊಳ್ಳಬೇಕು. ಒಮ್ಮೆ ನಾವು ನಮ್ಮ ದೇಶದಲ್ಲಿ ಚಾಂಪಿಯನ್​ ಟ್ರೋಫಿಯನ್ನು ಆಯೋಜಿಸಲು ಸಾಧ್ಯವಾಗಿದೆ. ಭಾರತ ತಂಡ ಬರಲು ಸಿದ್ಧರಿಲ್ಲ. ಅವರು ನಮ್ಮ ದರದಲ್ಲಿ ಪಾಲ್ಗೊಳಬೇಕು ಎಂದು ಪಾಕಿಸ್ತಾನ ಸುದ್ದಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

ಭವಿಷ್ಯದಲ್ಲಿ ಅವರ ದೇಶದಲ್ಲಿ ಹೋಗಿ ಅವರ ನೆಲದಲ್ಲಿ ಹಿನಾಯವಾಗಿ ಸೋಲಿಸಿ ಎಂದು ಅಖ್ತರ್​ ತಮ್ಮ ಪಾಕಿಸ್ತಾನ ತಂಡಕ್ಕೆ ಕೇಳಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 2012-13ರಲ್ಲಿ ಸೀಮಿತ ಪಂದ್ಯಗಳ ಸರಣಿಗಾಗಿ ಭಾರತಕ್ಕೆ ನಂತರ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸಂಬಂಧವನ್ನು ಹೊಂದಿಲ್ಲ . 2008 ರ ಏಷ್ಯಾಕಪ್‌ನಲ್ಲಿ ಭಾರತ ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿತು ಮತ್ತು ಆ ನಂತರ ಆ ದೇಶಕ್ಕೆ ಭಾರತ ಪ್ರವಾಸ ಮಾಡಿಲ್ಲ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net