ಟಿ20 ವಿಶ್ವಕಪ್​ ಟೂರ್ನಿಗೆ ದಾಖಲೆ ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ; ಚಾಂಪಿಯನ್ ತಂಡ ಗಳಿಸುವ ಹಣವೆಷ್ಟು ಗೊತ್ತೇ?

web t20 wc prize
Published on

ನ್ಯೂಯಾರ್ಕ್​: ಹಾಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯ ವಿಜೇತ ತಂಡ ದಾಖಲೆಯ 20.36 ಕೋಟಿ ರೂ. (2.45 ದಶಲಕ್ಷ ಡಾಲರ್​) ಬಹುಮಾನ ಮೊತ್ತವನ್ನು ಪಡೆಯಲಿದೆ ಎಂದು ಐಸಿಸಿ ಸೋಮವಾರ ಘೋಷಿಸಿದೆ. 93.51 ಕೋಟಿ ರೂ. (11.25 ದಶಲಕ್ಷ ಡಾಲರ್​) ಟೂರ್ನಿಯ ಒಟ್ಟು ಬಹುಮಾನ ಮೊತ್ತವಾಗಿದ್ದು, ರನ್ನರ್​ಅಪ್​ ತಂಡ 10.64 ಕೋಟಿ ರೂ. (1.28 ದಶಲಕ್ಷ ಡಾಲರ್​) ಬಹುಮಾನ ಪಡೆಯಲಿದೆ. ಸೆಮಿೈನಲ್​ನಲ್ಲಿ ಸೋತ ಎರಡು ತಂಡಗಳು 6.54 ಕೋಟಿ ರೂ. (7,87,500 ಡಾಲರ್​) ಬಹುಮಾನ ಪಡೆಯಲಿವೆ.

ಹಿಂದಿನ 2022ರ ಆವೃತ್ತಿಯಲ್ಲಿ ಒಟ್ಟು ಬಹುಮಾನ ಮೊತ್ತ 46.55 ಕೋಟಿ ರೂ. ಆಗಿದ್ದರೆ, ಈ ಬಾರಿ ದುಪ್ಪಟ್ಟು ಏರಿಕೆ ಮಾಡಲಾಗಿದೆ. 2022ರಲ್ಲಿ ವಿಜೇತ ಇಂಗ್ಲೆಂಡ್​ ತಂಡ 13.30 ಕೋಟಿ ರೂ. ಪಡೆದಿತ್ತು.

ಸೂಪರ್​&8 ಹಂತದಲ್ಲಿ ಹೊರಬೀಳುವ 4 ತಂಡಗಳು ತಲಾ 3.17 ಕೋಟಿ ರೂ. ಪಡೆಯಲಿವೆ. 9, 10, 11, 12ನೇ ಸ್ಥಾನಿ ತಂಡಗಳು ತಲಾ 2.05 ಕೋಟಿ ರೂ. ಮತ್ತು ಉಳಿದ 13ರಿಂದ 20ನೇ ಸ್ಥಾನ ಪಡೆವ ತಂಡಗಳು ತಲಾ 1.87 ಕೋಟಿ ರೂ. ಗಳಿಸಲಿವೆ.

ಇದಲ್ಲದೆ ಲೀಗ್​ ಮತ್ತು ಸೂಪರ್​&8 ಹಂತದಲ್ಲಿ ಪ್ರತಿ ಪಂದ್ಯದ ವಿಜೇತ ತಂಡ 25.89 ಲಕ್ಷ ರೂ. ಬಹುಮಾನ ಪಡೆಯಲಿವೆ. ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆ 20ಕ್ಕೆ ಏರಿರುವಂತೆಯೇ ಬಹುಮಾನ ಮೊತ್ತವೂ ದಾಖಲೆಯ ಏರಿಕೆ ಕಂಡಿದ್ದು, ಇದುವರೆಗಿನ ಅತ್ಯಧಿಕ ಬಹುಮಾನ ಮೊತ್ತದ ಟಿ20 ವಿಶ್ವಕಪ್​ ಟೂರ್ನಿ ಇದಾಗಿದೆ ಎಂದು ಐಸಿಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net