VIDEO| ಹಾಲಿ ಕ್ರೀಡಾಪಟುಗಳ ಬಗ್ಗೆ ಅಂಜುಗೆ ಅಸೂಯೆ! ಹೀಗಿದೆ ಕಾರಣ...

anju web
Published on

ನವದೆಹಲಿ: ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ ಪದಕ ಜಯಿಸಿದ ಮೊದಲ ಭಾರತೀಯರೆನಿಸಿರುವ ಮಾಜಿ ಲಾಂಗ್​ಜಂಪ್​ ತಾರೆ ಅಂಜು ಬಾಬಿ ಜಾರ್ಜ್​, ಪ್ರಧಾನಿ ನರೇಂದ್ರ ಮೋದಿ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹವನ್ನು ಅವರ ಎದುರಿನಲ್ಲೇ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

ಕ್ರಿಸ್​ಮಸ್​ ಪ್ರಯುಕ್ತ ಪ್ರಧಾನಿ ನಿವಾಸದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿರುವ ಅಂಜು, ಮೋದಿ ಪ್ರೋತ್ಸಾಹದಿಂದಾಗಿ ಈಗ ದೇಶದಲ್ಲಿ ಕ್ರೀಡಾಕ್ಷೇತ್ರ ಉತ್ತಮ ಯಶಸ್ಸು ಕಂಡಿದೆ. ನನಗೆ ಈಗಿನ ಕ್ರೀಡಾಪಟುಗಳನ್ನು ನೋಡಿದಾಗ ಅಸೂಯೆಯಾಗುತ್ತದೆ. ನನ್ನ ತಪ್ಪಾದ ಕಾಲದಲ್ಲಿ ಕ್ರೀಡೆಯಲ್ಲಿ ತೊಡಗಿಕೊಂಡಿದ್ದೆ ಎಂದಿದ್ದಾರೆ.

ಕ್ರೀಡಾಪಟುವಾಗಿ 25 ವರ್ಷಗಳಿಂದ ಈ ಕ್ಷೇತ್ರವನ್ನು ಗಮನಿಸುತ್ತಿದ್ದೇನೆ. ಈಗ ಸಾಕಷ್ಟು ಬದಲಾವಣೆಗಳಾಗಿವೆ. ನನಗೆ 20 ವರ್ಷಗಳ ಹಿಂದೆ ಮೊದಲ ಅಂತಾರಾಷ್ಟ್ರೀಯ ಪದಕ ದೊರೆತಾಗ ನನ್ನ ಇಲಾಖೆಯಲ್ಲೂ ಬಡ್ತಿ ದೊರೆತಿರಲಿಲ್ಲ. ಆದರೆ ಕಳೆದ ವರ್ಷ ನೀರಜ್​ ಚೋಪ್ರಾ ಪದಕ ಗೆದ್ದಾಗ ಎಂಥ ಬದಲಾವಣೆಯಾಗಿತ್ತು. ದೇಶದಲ್ಲಿ ಎಷ್ಟೊಂದು ಸಂಭ್ರಮವಿತ್ತು ಎಂದು ಅಂಜು ವಿವರಿಸಿದ್ದಾರೆ. ಅಂಜು ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net