ಪಾಕಿಸ್ತಾನ ಗೆಲ್ಲಬೇಕೆಂದು ನಾನು ಬಯಸುತ್ತೇನೆ... ಹೈವೋಲ್ಟೇಜ್ ಪಂದ್ಯದ ಕುರಿತು Team India ಮಾಜಿ ಆಟಗಾರನ ಹೇಳಿಕೆ ವೈರಲ್

India Pakistan
Published on

ನವದೆಹಲಿ: ಭಾನುವಾರ (ಫೆಬ್ರವರಿ 23) ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ (Team India) ಹಾಗೂ ಪಾಕ್ (Pakistan) ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ವಿಶ್ವವೇ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದೆ. ಈ ಪಂದ್ಯದ ಕುರಿತು ಇದೀಗ ಟೀಮ್​ ಇಂಡಿಯಾದ ಮಾಜಿ ಆಟಗಾರರೊಬ್ಬರು ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದ್ದು, ವಿವಾದದ ಸ್ವರೂಪ ಪಡೆಯುವ ಲಕ್ಷಣಗಳು ಗೋಚರಿಸಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ (Team India)  ಮಾಜಿ ಆಟಗಾರ ಅತುಲ್ ವಾಸ್ಸನ್​, ಫೆಬ್ರವರಿ 23ರಂದು ನಡೆಯಲಿರುವ ಭಾರತ ಹಾಗೂ ಪಾಕ್ ನಡುವಿನ ಪಂದ್ಯದಲ್ಲಿ ನಾನು ಪಾಕಿಸ್ತಾನ ಗೆಲ್ಲಲಿ ಎಂದು ಆಶಿಸುತ್ತೇನೆ. ಏಕೆಂದರೆ ಅದು ಮೋಜಿನ, ಪಂದ್ಯಾವಳಿಯ ಪ್ರಕಾರವಾಗಿರುತ್ತದೆ. ಪಾಕಿಸ್ತಾನವನ್ನು ಗೆಲ್ಲಲು ಬಿಟ್ಟರೆ ಅದು ಸ್ಫರ್ಧೆಯಾಗಿರುತ್ತದೆ. ಕ್ರೀಡೆ ಎಂದರೆ ಸಮಾನ ಹೋರಾಟ ಇರಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ತಂಡದ ಸಮತೋಲತೆ ನೋಡುವುದಾದರೆ ಭಾರತ ತಂಡದಲ್ಲಿ ಉತ್ತಮ ಬ್ಯಾಟರ್​ಗಳಿದ್ದಾರೆ. ಎಂಟನೇ ಕ್ರಮಾಂಕದವರೆಗೆ ಟೀಮ್​ ಇಂಡಿಯಾದಲ್ಲಿ ಬ್ಯಾಟರ್​ಗಳಿದ್ದು, ರೋಹಿತ್ ಐವರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿದ್ದಾರೆ ಮತ್ತು ಈ ತಂಡ ದುಬೈಗೆ ಉತ್ತಮವಾಗಿದೆ. ನಿಮ್ಮಲ್ಲಿರುವದರಲ್ಲಿ ನಂಬಿಕೆ ಇರಿಸಿ ಮತ್ತು ಮುಂದುವರಿಯಿರಿಬ ಎಂದು ಟೀಮ್ ಇಂಡಿಯಾ (Team India) ಮಾಜಿ ಆಟಗಾರ ಅತುಲ್ ವಾಸ್ಸನ್ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್. ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.

ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ), ಬಾಬರ್ ಅಜಮ್, ಇಮಾಮ್-ಉಲ್-ಹಕ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಷ್ದಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹರೀಸ್ ರೌಫ್, ಶಾಹಿನ್ ಹೌಫ್, ಮೊಹಮ್ಮದ್ ಹೌಫ್, ಮೊಹಮ್ಮದ್ ಹೌಫ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net