ಚಹಲ್​ರಿಂದ ನಾನು ಹಣವನ್ನು ಕೇಳಿಲ್ಲ; 60 ಕೋಟಿ ರೂ. ಪರಿಹಾರದ ಕುರಿತು Dhanashree Verma ಸ್ಪಷ್ಟನೆ

Dhanashree Chahal
Published on

ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಯಜುವೇಂದ್ರ ಚಹಲ್ (Yuzvendra Chahal) ಹಾಗೂ ಧನಶ್ರೀ ವರ್ಮಾ (Dhanashree Verma) ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದು, ಐದು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ಧಾರೆ.  ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಪರಸ್ಪರ ಬೇರೆಯಾಗಿದ್ದಾರೆ. ವಾಸ್ತವವಾಗಿ ಬಹಳ ದಿನಗಳಿಂದ ಇಬ್ಬರೂ ಬೇರೆಯಾಗಿ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದ್ದರು. ಅಲ್ಲದೆ ಇಷ್ಟರಲ್ಲೇ ಈ ಇಬ್ಬರು ಅಧಿಕೃತವಾಗಿ ದೂರವಾಗಲಿದ್ದಾರೆ ಎಂಬ ವರದಿಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಇದೀಗ ಈ ಜೋಡಿಯ ದಾಂಪತ್ಯ ಜೀವನ ಅಂತ್ಯಗೊಂಡಿದೆ.

ದಂಪತಿಗಳು ವಿಚ್ಛೇದನದ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆಯೊಂದು ಶುರುವಾಗಿದೆ. ಯಜುವೇಂದ್ರ ಚಹಲ್ ಪತ್ನಿ ಧನಶ್ರೀಗೆ ಜೀವನಾಂಶದ ರೂಪದಲ್ಲಿ 60 ಕೋಟಿ ರೂ. ಪರಿಹಾರ ನೀಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟ್ರೆಂಡ್ ಆಗುತ್ತಿದೆ. ವಿಚ್ಛೇದನ ಪ್ರಕ್ರಿಯೆ ಬಳಿಕ ಈ ಮೊತ್ತವನ್ನು ಧನಶ್ರೀ ಅವರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ಧನಶ್ರೀ ವರ್ಮಾ (Dhanashree Verma) ಸ್ಪಷ್ಟನೆ ನೀಡಿದ್ದು, ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಜೀವನಾಂಶದ ಅಂಕಿ ಅಂಶದ ಬಗ್ಗೆ ಹರಡುತ್ತಿರುವ ಆಧಾರರಹಿತ ಹಕ್ಕುಗಳಿಂದ ನಾವು ತೀವ್ರವಾಗಿ ಆಕ್ರೋಶಗೊಂಡಿದ್ದೇವೆ. ನಾನು ಸಂಪೂರ್ಣವಾಗಿ ಸ್ಪಷ್ಟವಾಗಿ ಹೇಳುತ್ತೇನೆ - ಅಂತಹ ಯಾವುದೇ ಮೊತ್ತವನ್ನು ಕೇಳಿಲ್ಲ, ಬೇಡಿಕೆಯಿಲ್ಲ ಅಥವಾ ನೀಡಲಾಗಿಲ್ಲ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ಇಂತಹ ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದು ತೀವ್ರ ಬೇಜವಾಬ್ದಾರಿಯಾಗಿದೆ. ಮಾಧ್ಯಮಗಳು ಸಂಯಮದಿಂದ ವರ್ತಿಸಬೇಕು ಮತ್ತು ತಪ್ಪು ಮಾಹಿತಿಯನ್ನು ಹರಡುವ ಮೊದಲು ಸತ್ಯವನ್ನು ಪರಿಶೀಲಿಸಬೇಕು ಮತ್ತು ಪ್ರತಿಯೊಬ್ಬರ ಗೌಪ್ಯತೆಗೆ ಗೌರವವನ್ನು ಹೊಂದಿರಬೇಕು ಎಂದು ಯಜುವೇಂದ್ರ ಚಹಲ್ ಮಾಜಿ ಪತ್ನಿ ಧನಶ್ರೀ ವರ್ಮಾ​ (Dhanashree Verma) ಪ್ರಕಟಣೆ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.

ಧನ್ಯವಾದಗಳು ದೇವರೇ!

ದೇವರು ನನ್ನನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ರಕ್ಷಿಸಿದ್ದಾನೆ. ನನಗೆ ತಿಳಿಯದೆಯೇ ನಾನು ಎಷ್ಟು ಬಾರಿ ರಕ್ಷಿಸಲ್ಪಟ್ಟಿದ್ದೇನೆಂದು ನಾನು ಎಣಿಸಬಲ್ಲೆ. ನನಗೆ ಗೊತ್ತಿಲ್ಲದಿದ್ದರೂ ಯಾವಾಗಲೂ ನನ್ನ ಜತೆ ಇರುವುದಕ್ಕೆ ಧನ್ಯವಾದಗಳು ದೇವರೇ.. ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಚಾಹಲ್ ಅವರ ಈ ಪೋಸ್ಟ್ ಯಾವುದರ ಬಗ್ಗೆ ಎಂದು ಯಾರಿಗೂ ತಿಳಿದಿಲ್ಲ. ಕ್ರಿಕೆಟ್ ಅಭಿಮಾನಿಗಳು ಅದು ಅವರ ಪತ್ನಿ ತನಶ್ರೀ ಬಗ್ಗೆ ಇರಬಹುದೆಂದು ಊಹಿಸುತ್ತಿದ್ದಾರೆ. 2024 ರಲ್ಲಿ, ಚಾಹಲ್ ಮತ್ತು ಧನಶ್ರೀ ವರ್ಮಾ​ (Dhanashree Verma) ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು ಎಂಬ ವರದಿಗಳು ಹೊರಬಿದ್ದವು. ಚಹಾಲ್ ತನ್ನ ಇನ್​ಸ್ಟಾಗ್ರಾಮ್ ಪುಟದಿಂದ ಧನಶ್ರೀ ಜತೆಗಿನ ಫೋಟೋಗಳನ್ನು ತೆಗೆದು ಹಾಕಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಅವರ ಫೋಟೋಗಳು ಧನಶ್ರೀ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇನ್ನೂ ಲಭ್ಯವಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net