KKR​ ವಿರುದ್ಧದ ಪಂದ್ಯದಲ್ಲಿ ಪಾಟಿದಾರ್​ರಿಂದ​ ವಿಚಿತ್ರ ನಿರ್ಧಾರ: ಮಾಜಿ ಕ್ರಿಕೆಟಿಗನಿಂದ ಅಚ್ಚರಿ ಹೇಳಿಕೆ! Rajat Patidar

Rajat Patidar
Published on

Rajat Patidar : ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕನಾಗಿ ಭಾರತದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಉತ್ತಮ ಆರಂಭ ಪಡೆಯಲಿಲ್ಲ. ಅವರ ನಾಯಕತ್ವದಲ್ಲಿ ಹಾಲಿ ಚಾಂಪಿಯನ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಐಪಿಎಲ್-2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಏಳು ವಿಕೆಟ್‌ಗಳಿಂದ ಸೋತಿತು.

ಈ ಪಂದ್ಯದೊಂದಿಗೆ ಅಜಿಂಕ್ಯ ರಹಾನೆ ಕೆಕೆಆರ್ ನಾಯಕನಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರೆ, ಆರ್‌ಸಿಬಿ ನಾಯಕನಾಗಿ ರಜತ್ ಪಾಟಿದಾರ್ ಅವರಿಗೆ ಇದು ಮೊದಲ ಪಂದ್ಯವಾಗಿದೆ. ಆದಾಗ್ಯೂ, ಹಿರಿಯ ಆಟಗಾರನಾಗಿರುವ ರಹಾನೆ, ಪಾಟಿದಾರ್ ಅವರ ತಂತ್ರಗಳಿಂದ ಸೋಲನ್ನು ಅನುಭವಿಸಿದರು ಎಂಬುದು ಗಮನಾರ್ಹ. ಈ ಸಂದರ್ಭದಲ್ಲಿ, ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.

ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ಆರಂಭದಲ್ಲಿ ಪಾಟಿದಾರ್ ಅವರನ್ನು ನಾನು ಕಡಿಮೆ ಅಂದಾಜು ಮಾಡಿದ್ದೆ. ಪವರ್ ಪ್ಲೇನಲ್ಲಿ ಕೃನಾಲ್​ ಪಾಂಡ್ಯ ಮತ್ತು ರಸಿಕ್​ ಸಲಾಂ ಕೈಯಲ್ಲಿ ಬೌಲಿಂಗ್ ಮಾಡಿಸುವ ರಜತ್ ಪಾಟಿದಾರ್ ಅವರ ವಿಚಿತ್ರ​ ನಿರ್ಧಾರ ಇಷ್ಟವಾಗಲಿಲ್ಲ. ಇಂತಹ ನಿರ್ಧಾರಗಳೊಂದಿಗೆ ರಜತ್ ಪಾಟಿದಾರ್ ನಾಯಕನಾಗಿ ಉತ್ತಮ ಪ್ರದರ್ಶನ ನೀಡಬಹುದೇ ಎಂಬ ಅನುಮಾನವಿತ್ತು? ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ.

ಕೆಕೆಆರ್ ವಿರುದ್ಧ ಮೊದಲ ಮೂರು ಓವರ್‌ಗಳು ಆರ್‌ಸಿಬಿಗೆ ಪಾಲಿಗೆ ಚೆನ್ನಾಗಿ ಬಂದವು. ಆದರೆ, ನಾಲ್ಕನೇ ಓವರ್‌ನಲ್ಲಿ ಪಾಟಿದಾರ್, ರಸಿಕ್ ಸಲಾಂ ಅವರನ್ನು ಬೌಲಿಂಗ್​ಗೆ ಇಳಿಸಿದರು. ಯಶ್ ದಯಾಳ್ ಅವರಿಗೆ ಇನ್ನೊಂದು ಓವರ್ ನೀಡಬಹುದಿತ್ತು. ಆದರೆ, ಐದನೇ ಓವರ್​ ಅನ್ನು ಕೃನಾಲ್ ಪಾಂಡ್ಯಗೆ ನೀಡಿದರು. ದಯವಿಟ್ಟು ಈ ರೀತಿ ಮಾಡಬೇಡಿ ಪಾಟಿದಾರ್ ಎಂದು ನಾನು ಮನಸ್ಸಿನಲ್ಲಿ ಯೋಚಿಸುತ್ತಿದ್ದೆ. ಈ ಅವಕಾಶವನ್ನು ಪಡೆದುಕೊಂಡ ರಹಾನೆ ಅದ್ಭುತವಾಗಿ ಬ್ಯಾಟಿಂಗ್​ ಮಾಡಿದರು. ಇದರಿಂದ ಕೆಕೆಆರ್ ತಂಡ 10 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ವಾಸ್ತವವಾಗಿ, ತಂಡವು 200ಕ್ಕಿಂತ ಹೆಚ್ಚು ರನ್ ಗಳಿಸಬೇಕಿತ್ತು. ಆದರೆ, ಪಾಟಿದಾರ್ ಅವರ ತಂತ್ರಗಳು ಕೆಲಸ ಮಾಡಲು ಪ್ರಾರಂಭಿಸಿದವು.

ಪಂದ್ಯ ಮುಂದುವರೆದಂತೆ, ವಿಶೇಷವಾಗಿ ಕೃನಾಲ್ ಪಾಂಡ್ಯ ಮೂರು ವಿಕೆಟ್ ಗೊಂಚಲು ಪಡೆದ ನಂತರ, ಆಟವು ತಿರುವು ಪಡೆಯುತ್ತಿರುವಂತೆ ಭಾಸವಾಯಿತು. ನಾವು ಆರ್‌ಸಿಬಿಯ ಸ್ಪಿನ್ ದಾಳಿಯನ್ನು ಪ್ರಶ್ನಿಸಿದ್ದೆವು. ಏಕೆಂದರೆ, ಆರಂಭದಲ್ಲಿ ತುಂಬಾ ದರ್ಬಲವಾಗಿತ್ತು. ಆದರೆ, ದುರ್ಬಲ ಕೊಂಡಿಯು ನಿಮ್ಮ ಬಲಿಷ್ಠವಾದಾಗ, ಅದಕ್ಕೆ ಶ್ರೇಯ ಸಲ್ಲುತ್ತದೆ. ಇಬ್ಬರು ಸ್ಪಿನ್ನರ್‌ಗಳು ನಾಲ್ಕು ವಿಕೆಟ್‌ಗಳನ್ನು ಪಡೆದರು. ದುಬಾರಿ ಮೊದಲ ಓವರ್‌ನ ನಂತರ ಕೃನಾಲ್ ಪಾಂಡ್ಯ ಪ್ರಭಾವಿತರಾದರು. ಲಯ ಮತ್ತು ನಿಖರತೆಯೊಂದಿಗೆ ಬೌಲಿಂಗ್ ಮಾಡಿದರು. ಇದೇ ಸಂದರ್ಭದಲ್ಲಿ ಸುಯಾಶ್ ದುಬಾರಿಯಾಗಿದ್ದರು. ಆದರೆ, ಸಡಿಲ ಎಸೆತಗಳನ್ನು ಎಸೆದು, ಅಪಾಯಕಾರಿ ಆಂಡ್ರೆ ರಸೆಲ್ ಅವರನ್ನು ಔಟ್ ಮಾಡಿದರು ಎಂದು ಚೋಪ್ರಾ ಹೇಳಿದರು.

ಒಟ್ಟಾರೆಯಾಗಿ ಆರ್‌ಸಿಬಿ ವಿರುದ್ಧದ ಐಪಿಎಲ್ 2025ರ ಪಂದ್ಯದಲ್ಲಿ ಕೆಕೆಆರ್ ತಂಡದ ಬ್ಯಾಟಿಂಗ್ ಪ್ರದರ್ಶನ ನಿರಾಶೆಗೊಂಡಿತು. 225+ ಮೊತ್ತದತ್ತ ನೋಡುತ್ತಿದ್ದರೂ, ಹಾಲಿ ಚಾಂಪಿಯನ್‌ಗಳು ಸಾಧಾರಣ ಮೊತ್ತಕ್ಕೆ ಪತನಗೊಂಡರು ಎಂಬುದನ್ನು ಆಕಾಶ್​ ಚೋಪ್ರಾ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net