Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ ಅದಕ್ಕೆ ವ್ಯಸನಿಯಾಗುತ್ತಿದ್ದಾರೆ. ಮದ್ಯದಲ್ಲೂ ಇದೀಗ ಲಿಂಗ ಸಮಾನತೆ ಇದೆ. ಆದರೆ, ಅಚ್ಚರಿಯ ಸಂಗತಿ ಏನೆಂದರೆ, ಮದ್ಯವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.
ಮದ್ಯಪಾನ ಮಾಡುವ ಮಹಿಳೆಯರಿಗೆ ಮಾತ್ರ ಕೆಲ ನಿರ್ದಿಷ್ಟ ಕಾಯಿಲೆಗಳು ಬರುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ಹೇಳುತ್ತವೆ. ಭಾರತೀಯ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರದ ವರದಿಯ ಪ್ರಕಾರ, ಮಹಿಳೆಯರ ದೇಹದ ಸಂಯೋಜನೆ ಮತ್ತು ರಾಸಾಯನಿಕ ಬದಲಾವಣೆಗಳು ಪುರುಷರಿಗಿಂತ ಭಿನ್ನವಾಗಿವೆ. ಹೀಗಾಗಿ, ಮಹಿಳೆಯರ ದೇಹವು ಪುರುಷರಿಗಿಂತ ಹೆಚ್ಚು ಮದ್ಯವನ್ನು ಹೀರಿಕೊಳ್ಳುತ್ತದೆ. ಪುರುಷರು ಮತ್ತು ಮಹಿಳೆಯರು ಒಂದೇ ಪ್ರಮಾಣದ ಮದ್ಯವನ್ನು ಸೇವಿಸಿದಾಗಲೂ, ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಮದ್ಯದ ಮಟ್ಟವನ್ನು ಹೊಂದಿರುತ್ತಾರೆ ಎಂದು ವರದಿಯಾಗಿದೆ. ಇದರಿಂದ ದೀರ್ಘಾವಧಿಯ ಪರಿಣಾಮಗಳು ಹೆಚ್ಚಿರುತ್ತವೆ.
ತಜ್ಞರು ಹೇಳುವಂತೆ ಮದ್ಯಪಾನವು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮದ್ಯಪಾನವು ದೇಹದ ಮೇಲೆ ಬೀರುವ ಋಣಾತ್ಮಕ ಪರಿಣಾಮಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಇತ್ತೀಚಿನ ಅಧ್ಯಯನಗಳ ಪ್ರಕಾರ, ಅಂಗಾಂಗ ಹಾನಿ ಮತ್ತು ಮದ್ಯಪಾನದಿಂದ ಉಂಟಾಗುವ ಮಾನಸಿಕ ಸಮಸ್ಯೆಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಇದನ್ನೂ ಓದಿ: ಆತ ಆಡೋದು ಗ್ಯಾರಂಟಿ… CSK ವಿರುದ್ಧದ ಪಂದ್ಯಕ್ಕೂ ಮುನ್ನವೇ RCB ಅಭಿಮಾನಿಗಳಿಗೆ ಗುಡ್ ನ್ಯೂಸ್! RCB
ಪುರುಷರಿಗಿಂತ ಮಹಿಳೆಯರ ದೇಹದಲ್ಲಿ ಕಡಿಮೆ ನೀರು ಇರುತ್ತದೆ. ಇದು ಅವರ ದೇಹವು ಹೆಚ್ಚು ಮದ್ಯವನ್ನು ಹೀರಿಕೊಳ್ಳಲು ಕಾರಣವಾಗುತ್ತದೆ. ಮಹಿಳೆಯರ ದೇಹವು ಮದ್ಯವನ್ನು ನಿರ್ವಿಷಗೊಳಿಸಲು ಹೆಚ್ಚು ಕೆಲಸ ಮಾಡುವುದಿಲ್ಲ. ಹೀಗಾಗಿ ಯಕೃತ್ತನ್ನು ಹೆಚ್ಚು ವೇಗವಾಗಿ ಹಾನಿಗೊಳಿಸುತ್ತದೆ.
ಎಂಆರ್ಐ ಸ್ಕ್ಯಾನ್ ಫಲಿತಾಂಶಗಳು ಮದ್ಯಪಾನವು ಮಹಿಳೆಯರಲ್ಲಿ ಪುರುಷರಿಗಿಂತ ಹೆಚ್ಚು ಮೆದುಳಿಗೆ ಹಾನಿಯನ್ನುಂಟುಮಾಡುತ್ತೆ ಎಂದು ತೋರಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮೆದುಳಿನ ಪ್ರಮಾಣ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ನಿಯಂತ್ರಣವಿಲ್ಲದೆ ಮದ್ಯಪಾನ ಮಾಡುವ ಪುರುಷರಲ್ಲಿ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. (ಏಜೆನ್ಸೀಸ್)
ಈ ಮೂರು ರಾಶಿಯ ಮಹಿಳೆಯರ ಕೋಪ ತುಂಬಾ ಅಪಾಯಕಾರಿಯಂತೆ… ಅವರೊಂದಿಗೆ ಎಚ್ಚರಿಕೆಯಿಂದಿರಿ! Zodiac Signs