ವಿರಾಟ್​ ಕೊಹ್ಲಿ ಸಮಸ್ಯೆ ಬಗ್ಗೆ ಚರ್ಚಿಸಲು ಇಷ್ಟವಿಲ್ಲ! ಅಚ್ಚರಿ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ | Virat

ವಿಜಯವಾಣಿ (5)
Published on

Virat Kohli: ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್​ ಪಂದ್ಯ ಸೋತ ಟೀಮ್ ಇಂಡಿಯಾಗೆ ಸದ್ಯ ಯಾವುದೂ ಸರಿಯಿಲ್ಲ ಎನ್ನುವಂತಾಗಿದೆ. ಭಾರತ ತಂಡದ ಪ್ರದರ್ಶನ ಸೇರಿದಂತೆ ನಾಯಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜ ಬ್ಯಾಟರ್​ಗಳು ನೀಡಿದ ಅತ್ಯಂತ ಕಳಪೆ ಪ್ರದರ್ಶನ ಇದೀಗ ವ್ಯಾಪಕ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧ ನಡೆದಿರುವ ಒಟ್ಟು ನಾಲ್ಕು ಟೆಸ್ಟ್​ನಲ್ಲಿ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿದ್ದು ಬಿಟ್ಟರೆ, ಉಳಿದ ಮ್ಯಾಚ್​ಗಳಲ್ಲಿ ವಿರಾಟ್​ ಪ್ರದರ್ಶನ ತೀರ ಕಳಪೆಯಾಗಿದೆ. ಈ ವಿಷಯ ಕ್ರಿಕೆಟ್ ಅಭಿಮಾನಿಗಳು ಹಾಗೂ ಮಾಜಿ ಹಿರಿಯ ಕ್ರಿಕೆಟಿಗರನ್ನು ಬೇಸರಕ್ಕೆ ದೂಡಿದ್ದು, ಕೊಹ್ಲಿ ಟೆಸ್ಟ್​ ನಿವೃತ್ತಿ ಬಗ್ಗೆ ಚರ್ಚಿಸುವಂತೆ ಮಾಡಿದೆ. ನಿವೃತ್ತಿ ವಿಷಯ ಒಂದೆಡೆಯಾದರೆ, ವಿರಾಟ್​ ಅವರ ಆಫ್​ ಸ್ಟಂಪ್​ ವಿಕೆಟ್​ ಸಮಸ್ಯೆ ಬಗ್ಗೆಗಿನ ಚರ್ಚೆ ಮತ್ತೊಂದೆಡೆ. ಕೊಹ್ಲಿಯ ಆಫ್​ ಸ್ಟಂಪ್​ ಸಮಸ್ಯೆ ಕುರಿತು ಕ್ರಿಕೆಟ್​ ತಜ್ಞರು ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ, ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಮಾರ್ಕ್​ ನಿಕೋಲಸ್​​ ಮಾತ್ರ ಬೇಸರ ಹೊರಹಾಕಿದ್ದಾರೆ.

"ನಾನು ವಿರಾಟ್ ಕೊಹ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ನನ್ನ ಪ್ರಕಾರ, ಅವರೊಬ್ಬ ಶ್ರೇಷ್ಠ ಕ್ರಿಕೆಟಿಗ. ಆದರೆ ಅವರ ಆಫ್ ಸ್ಟಂಪ್ ಸಮಸ್ಯೆಯನ್ನು ಅವರಿಂದಲೇ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಬೇಸರ. ಅವರಂತಹ ಒಬ್ಬ ಸ್ಟಾರ್ ಬ್ಯಾಟರ್​ಗೆ ತಮ್ಮ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳಲು ಅಸಾಧ್ಯವಾಗಿದೆ ಎಂದರೆ, ಇಲ್ಲಿ ನೀವು ಕೊಹ್ಲಿಯ ಬ್ಯಾಟಿಂಗ್ ಕೋಚ್ ಅವರ ಪಾತ್ರವನ್ನು ಪ್ರಶ್ನಿಸಬೇಕಾಗುತ್ತದೆ. ನನ್ನ ಪ್ರಕಾರ, ಬ್ಯಾಟಿಂಗ್ ಕೋಚ್​ ಇದಕ್ಕೆ ಉತ್ತರಿಸಬೇಕು. ಆದರೆ ಆ ಬೆಳವಣಿಗೆ ನನಗೆ ಕಾಣಿಸಿಲ್ಲ" ಎಂದು ನಿಕೋಲಸ್​ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net