Sreesanth Slapgate | ಅವರು ಏಕೆ ಕೋಪ ಮಾಡಿಕೊಂಡಿದ್ದಾರೋ ಗೊತ್ತಿಲ್ಲ..ಶ್ರೀಶಾಂತ್ ಪತ್ನಿ ಆಕ್ರೋಶಕ್ಕೆ ಲಲಿತ್ ಮೋದಿ ಹೇಳಿದ್ದೇನು..?

Sreesanth Slapgate
Published on

Sreesanth Slapgate: ಐಪಿಎಲ್ ಉದ್ಘಾಟನಾ ಋತು 2008ರಲ್ಲಿ ನಡೆದ ವಿವಾದಾತ್ಮಕ ಸ್ಲ್ಯಾಪ್‌ಗೇಟ್ ಘಟನೆಯ ಕುರಿತಾಗಿನ ವಿಡಿಯೋವನ್ನು ಇತ್ತೀಚೆಗೆ ಮೈಕೆಲ್ ಕ್ಲಾರ್ಕ್ ಅವರ ಬಿಯಾಂಡ್23 ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಂಚಿಕೊಂಡಿದ್ದು, ಇದನ್ನು ಶ್ರೀಶಾಂತ್ ಪತ್ನಿ ಭುವನೇಶ್ವರಿ ಖಂಡಿಸಿದ್ದರು.

ಆ ಘಟನೆಯ ಕುರಿತಾದ ದೃಶ್ಯಗಳ ಬಿಡುಗಡೆಯ ಬಗ್ಗೆ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದ ಭುವನೇಶ್ವರಿ, ಇದು ಅಸಹ್ಯಕರ, ಹೃದಯಹೀನ ಮತ್ತು ಅಮಾನವೀಯ ಎಂದು ಕರೆದಿದ್ದರು.

ಭುವನೇಶ್ವರಿ ಟೀಕೆಗೆ ಸದ್ಯ ಪ್ರತಿಕ್ರಿಯೆ ನೀಡಿರುವ ಲಲಿತ್​, ಅವರು (ಭುವನೇಶ್ವರಿ) ಏಕೆ ಕೋಪಗೊಂಡಿದ್ದಾರೋ ನನಗೆ ಗೊತ್ತಿಲ್ಲ, ಆ ಕಾರ್ಯಕ್ರಮದಲ್ಲಿ ಕೇಳಲಾದ ಪ್ರಶ್ನೆಗೆ ನಡೆದ ಸತ್ಯವನ್ನು ಹಂಚಿಕೊಂಡಿದ್ದೇನೆ, ನಾನು ಸತ್ಯವನ್ನು ಮಾತನಾಡುವುದಕ್ಕೆ ಹೆಸರುವಾಸಿಯಾಗಿದ್ದೇನೆ, 2008ರ ಘಟನೆಯ ಕುರಿತು ಇಲ್ಲಿಯವರೆಗೂ ಯಾರೂ ನನ್ನನ್ನು ಕೇಳಿರಲಿಲ್ಲ, ಕ್ಲಾರ್ಕ್ ಕೇಳಿದಾಗ ಉತ್ತರ ನೀಡಿದ್ದೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಶ್ರೀಶಾಂತ್ ಪತ್ನಿ ಭುವನೇಶ್ಚರಿ ಹೇಳಿದ್ದೇನು..?

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಭುವನೇಶ್ವರಿ, ಸಮಾಧಿಯಾಗಿದ್ದ ವಿಷಯವನ್ನು ಮತ್ತೆ ಕೆದಕುವ ಅಗತ್ಯವಿರಲಿಲ್ಲ, ತಮ್ಮ ಅಗ್ಗದ ಪ್ರಚಾರಕ್ಕಾಗಿ ಒಂದುವರೆ ದಶಕದ ಘಟನೆಯನ್ನು ಎಳೆದು ತಂದಿರುವವರು ಮನುಷ್ಯರೇ ಅಲ್ಲ, ಶ್ರೀಶಾಂತ್​ ಮತ್ತು ಹರ್ಭಜನ್ ಘಟನೆ ಮರೆತು ಮುಂದೆ ಸಾಗಿದ್ದು, ಅವರ ಮುಗ್ಧ ಮಕ್ಕಳು ಈಗ ತಮ್ಮದಲ್ಲದ ತಪ್ಪಿಗೆ ಪ್ರಶ್ನೆಗಳನ್ನು ಮತ್ತು ಅವಮಾನವನ್ನು ಎದುರಿಸಬೇಕಾಗಿದೆ ಎಂದಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net