ಹಾಲಿ ಚಾಂಪಿಯನ್ಸ್​ ಹುಬ್ಬಳ್ಳಿ ಟೈಗರ್ಸ್​​ಗೆ ಮಣಿದ ಮಂಗಳೂರು ಡ್ರ್ಯಾಗನ್ಸ್​

web maha my vs mng
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಾಲಿ ಚಾಂಪಿಯನ್ಸ್​ ಹುಬ್ಬಳ್ಳಿ ಟೈಗರ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್​ ವಿರುದ್ಧದ ಮಳೆಬಾಧಿತ ಪಂದ್ಯದಲ್ಲಿ ವಿಜೆಡಿ ನಿಯಮದನ್ವಯ 15 ರನ್​ಗಳಿಂದ ಗೆದ್ದು ಶುಭಾರಂಭ ಕಂಡಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಮಂಗಳೂರು ತಂಡ 16 ಓವರ್​ಗಳಲ್ಲಿ 7 ವಿಕೆಟ್​ಗೆ 143 ರನ್​ ಗಳಿಸಿದಾಗ ಮಳೆ ಅಡಚಣೆ ತಂದಿತು. ಬಳಿಕ ಮಳೆ ನಿಂತಾಗ ಮಂಗಳೂರು ಇನಿಂಗ್ಸ್​ ಅಲ್ಲಿಗೆ ಸ್ಥಗಿತಗೊಳಿಸಿ, ಹುಬ್ಬಳ್ಳಿಗೆ 7 ಓವರ್​ಗಳಲ್ಲಿ 80 ರನ್​ ಗಳಿಸುವ ಪರಿಷತ ಗುರಿ ನೀಡಲಾಯಿತು. ಪ್ರತಿಯಾಗಿ ಹುಬ್ಬಳ್ಳಿ ತಂಡ ಆರಂಭಿಕ ತಿಪ್ಪಾರೆಡ್ಡಿ (20*ರನ್​, 12 ಎಸೆತ, 2 ಸಿಕ್ಸರ್​) ಮತ್ತು ನಾಯಕ ಮನೀಷ್​ ಪಾಂಡೆ (24*ರನ್​, 14 ಎಸೆತ, 3 ಬೌಂಡರಿ) ಬಿರುಸಿನ ಬ್ಯಾಟಿಂಗ್​ನಿಂದ 5.1 ಓವರ್​ಗಳಲ್ಲಿ 1 ವಿಕೆಟ್​ಗೆ 69 ರನ್​ ಗಳಿಸಿದಾಗ ಮತ್ತೆ ಮಳೆ ಅಡಚಣೆ ತಂದಿತು. ಆಗ ಹುಬ್ಬಳ್ಳಿ ಗೆಲುವಿಗೆ 11 ಎಸೆತಗಳಲ್ಲಿ 11 ರನ್​ ಬೇಕಿತ್ತು. ಆದರೆ ವಿಜೆಡಿ ನಿಯಮದನ್ವಯ ಹುಬ್ಬಳ್ಳಿ ಆಗ 55 ರನ್​ ಗಳಿಸಿದರೆ ಸಾಕಿತ್ತು. ಹೀಗಾಗಿ ಬಳಿಕ ಪಂದ್ಯ ಮುಂದುವರಿಯದೆ ಹುಬ್ಬಳ್ಳಿ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಮಂಗಳೂರು ಡ್ರಾ$ಗನ್ಸ್​: 16 ಓವರ್​ಗಳಲ್ಲಿ 7 ವಿಕೆಟ್​ಗೆ 143 (ನೊರೋನ್ಹಾ 23, ರೋಹನ್​ 24, ನಿಕಿನ್​ 33, ಸಿದ್ಧಾರ್ಥ್​ 44, ಎಲ್​ಆರ್​ ಕುಮಾರ್​ 30ಕ್ಕೆ 3, ವಿದ್ವತ್​ 27ಕ್ಕೆ 1). ಹುಬ್ಬಳ್ಳಿ ಟೈಗರ್ಸ್​: 5.1 ಓವರ್​ಗಳಲ್ಲಿ 1 ವಿಕೆಟ್​ಗೆ 69 (ತಿಪ್ಪಾರೆಡ್ಡಿ 20*, ತಾಹ 12, ಮನೀಷ್​ ಪಾಂಡೆ 24*, ದರ್ಶನ್​ ಎಂಬಿ 24ಕ್ಕೆ 1). ಪಂದ್ಯಶ್ರೇಷ್ಠ: ತಿಪ್ಪಾರೆಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net