ಪ್ರೊ ಕಬಡ್ಡಿ ಲೀಗ್ ಹರಾಜಿನ ಮೊದಲ ದಿನ 8 ಆಟಗಾರರು ಕೋಟ್ಯಧಿಪತಿಗಳು! ಬೆಂಗಳೂರು ಬುಲ್ಸ್​ಗೆ ಸೇರ್ಪಡೆಯಾದ ಸ್ಟಾರ್​ ರೈಡರ್​

web pkl
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ರೈಡರ್​ ಸಚಿನ್​ ತನ್ವರ್​ 2.15 ಕೋಟಿ ರೂ.ಗೆ ತಮಿಳ್​ ತಲೈವಾಸ್​ ತಂಡಕ್ಕೆ ಸೇರ್ಪಡೆಯಾಗುವುದರೊಂದಿಗೆ, ಮುಂಬೈನಲ್ಲಿ ನಡೆಯುತ್ತಿ

ರುವ ಪ್ರೊ ಕಬಡ್ಡಿ ಲೀಗ್​ 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಆಟಗಾರ ಎನಿಸಿದರು. ಮೊದಲ ದಿನದ ಪ್ರಕ್ರಿಯೆಯಲ್ಲಿ ಒಟ್ಟು 8 ಆಟಗಾರರು ಕೋಟ್ಯಧಿಪತಿಗಳಾದರು.

ಇರಾನ್​ನ ಆಲ್ರೌಂಡರ್​ ಮೊಹಮದ್​ರೇಜಾ ಚಿಯಾನೆಹ್​ 2ನೇ ಗರಿಷ್ಠ 2.07 ಕೋಟಿ ರೂ.ಗೆ ಹರಿಯಾಣ ಸ್ಟೀಲರ್ಸ್​ ಸೇರಿದರೆ, ಗುರ್ಮನ್​ ಸಿಂಗ್​ 1.97 ಕೋಟಿ ರೂ.ಗೆ ಗುಜರಾತ್​ ಪಾಲಾದರು. ಬೆಂಗಳೂರು ಬುಲ್ಸ್ ಮಾಜಿ ಆಟಗಾರ ಪವನ್​ ಸೆಹ್ರಾವತ್​ 1.72 ಕೋಟಿ ರೂ.ಗೆ ತೆಲುಗು ಟೈಟಾನ್ಸ್​ಗೆ ಮರಳಿದರು.

ಬೆಂಗಳೂರು ಬುಲ್ಸ್​ನ ಮಾಜಿ ಆಟಗಾರ ಭರತ್​ 1.30 ಕೋಟಿ ರೂ.ಗೆ ಯುಪಿ ಯೋಧಾಸ್​ ಸೇರಿದರು. ಮಣಿಂದರ್​ ಸಿಂಗ್​ 1.15 ಕೋಟಿ ರೂ.ಗೆ ಬೆಂಗಾಲ್​ ತಂಡಕ್ಕೆ ಮರಳಿದರೆ, ಸುನೀಲ್​ ಕುಮಾರ್​ ‘1.015 ಕೋಟಿ ರೂ.ಗೆ ಯು ಮುಂಬಾ ಸೇರಿದರು. ಅಜಿಂಕ್ಯ ಪವಾರ್​ 1.10 ಕೋಟಿ ರೂ., ಅನುಭವಿ ರೈಡರ್​ ಪ್ರದಿಪ್​ ನರ್ವಾಲ್​ 70 ಲಕ್ಷ ರೂ.ಗೆ ಬೆಂಗಳೂರು ಬುಲ್ಸ್​ಗೆ ಸೇರ್ಪಡೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net