ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವೇಗಿಗಳಾದ ಆದಿತ್ಯ ಗೋಪಾಲ್ (43ಕ್ಕೆ 3), ನವೀನ್ ಎಂಜಿ (8ಕ್ಕೆ 2) ಬಿಗಿ ದಾಳಿ ಮತ್ತು ಆರಂಭಿಕ ಚೇತನ್ ಎಲ್ಆರ್ (53 ರನ್, 34 ಎಸೆತ, 5 ಬೌಂಡರಿ, 3 ಸಿಕ್ಸರ್) ಬಿರುಸಿನ ಅರ್ಧಶತಕದ ಬಲದಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ವಿರುದ್ಧ 9 ವಿಕೆಟ್ಗಳಿಂದ ಗೆದ್ದು ಶುಭಾರಂಭ ಕಂಡಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ದೇವದತ್ ಪಡಿಕ್ಕಲ್ ಸಾರಥ್ಯದ ಗುಲ್ಬರ್ಗಾ ತಂಡ 16.4 ಓವರ್ಗಳಲ್ಲಿ 116 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಚೇತನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ (47*ರನ್, 29 ಎಸೆತ, 6 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ಗೆ 101 ರನ್ ಜತೆಯಾಟವಾಡಿದ ಬಲದಿಂದ ಬೆಂಗಳೂರು ತಂಡ 11.2 ಓವರ್ಗಳಲ್ಲೇ 1 ವಿಕೆಟ್ಗೆ 117 ರನ್ ಗಳಿಸಿ ಜಯಿಸಿತು.
ಗುಲ್ಬರ್ಗಾ ಮಿಸ್ಟಿಕ್ಸ್: 16.4 ಓವರ್ಗಳಲ್ಲಿ 116 (ಲವನೀತ್ 14, ಪಡಿಕ್ಕಲ್ 20, ಅನೀಶ್ 4, ಸ್ಮರಣ್ 8, ಶರತ್ 13, ಪ್ರವಿಣ್ ದುಬೆ 19, ಲವಿಶ್ 22ಕ್ಕೆ 2, ಆದಿತ್ಯ ಗೋಪಾಲ್ 43ಕ್ಕೆ 3, ನವೀನ್ ಎಂಜಿ 8ಕ್ಕೆ 2, ಮೊಹ್ಸಿನ್ ಖಾನ್ 8ಕ್ಕೆ 2), ಬೆಂಗಳೂರು ಬ್ಲಾಸ್ಟರ್ಸ್: 11.2 ಓವರ್ಗಳಲ್ಲಿ 117 (ಚೇತನ್ ಎಲ್ಆರ್ 53, ಮಯಾಂಕ್ 47*, ವೈಶಾಕ್ 44ಕ್ಕೆ 1).