

ಬೆಂಗಳೂರು: ಯುವ ವೇಗಿ ಮನ್ವಂತ್ ಕುಮಾರ್ (23ಕ್ಕೆ 3) ಮಾರಕ ದಾಳಿ ಮತ್ತು ವಿಕೆಟ್ ಕೀಪರ್&ಆರಂಭಿಕ ಲವನೀತ್ ಸಿಸೋಡಿಯಾ (69 ರನ್, 46 ಎಸೆತ, 10 ಬೌಂಡರಿ, 2 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯಲ್ಲಿ ಗೆಲುವಿನ ಓಟವನ್ನು ಸತತ 5ನೇ ಪಂದ್ಯಕ್ಕೆ ವಿಸ್ತರಿಸಿದೆ. ಮನೀಷ್ ಪಾಂಡೆ ಸಾರಥ್ಯದ ತಂಡ ಶನಿವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ 8 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಶಿವಮೊಗ್ಗ ತಂಡ 8 ವಿಕೆಟ್ಗೆ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಹುಬ್ಬಳ್ಳಿ ತಂಡ 16.4 ಓವರ್ಗಳಲ್ಲಿ 2 ವಿಕೆಟ್ಗೆ 139 ರನ್ ಪೇರಿಸಿ ಜಯಿಸಿತು. ಸಿಸೋಡಿಯಾ ಮತ್ತು ಮೊಹಮದ್ ತಾಹ (37) ಮೊದಲ ವಿಕೆಟ್ಗೆ 85 ರನ್ ಸೇರಿಸಿ ಹುಬ್ಬಳ್ಳಿ ಚೇಸಿಂಗ್ ಸುಲಭಗೊಳಿಸಿದರು.
ಶಿವಮೊಗ್ಗ ಲಯನ್ಸ್: 8 ವಿಕೆಟ್ಗೆ 138 (ರೋಹನ್ ಕದಂ 14, ನಿಹಾಲ್ 3, ಅಭಿನವ್ 10, ಶ್ರೇಯಸ್ 10, ಪ್ರಣವ್ 46*, ಶಿವರಾಜ್ 21, ಮನ್ವಂತ್ 23ಕ್ಕೆ 3, ಪ್ರವಿನ್ ದುಬೆ 15ಕ್ಕೆ 2, ಕೆಸಿ ಕಾರ್ಯಪ್ಪ 27ಕ್ಕೆ 1). ಹುಬ್ಬಳ್ಳಿ ಟೈಗರ್ಸ್: 16.4 ಓವರ್ಗಳಲ್ಲಿ 2 ವಿಕೆಟ್ಗೆ 139 (ಸಿಸೋಡಿಯಾ 69, ತಾಹ 37, ನಾಗ ಭರತ್ 23*, ಶ್ರೇಯಸ್ 41ಕ್ಕೆ 1). ಪಂದ್ಯಶ್ರೇಷ್ಠ: ಮನ್ವಂತ್ ಕುಮಾರ್.