

ಮುಂಬೈ: ಬಾಲಿವುಡ್ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್ಗಳು ನಿರ್ಮಾಣವಾಗಿವೆ. ಅದರಲ್ಲೂ ಕ್ರೀಡೆಗೆ ಸಂಬಂಧಿಸಿದ ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. ಇದೀಗ ಮತ್ತೊಂದು ಬಯೋಪಿಕ್ ಬಾಲಿವುಡ್ನಲ್ಲಿ ಸದ್ದು ಮಾಡುತ್ತಿದೆ.
ಹೌದು, ಸಿಕ್ಸರ್ ಗಳ ಸರದಾರ, ಮಾಜಿ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಕುರಿತಾದ ಬಯೋಪಿಕ್ ಇದೀಗ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಬಾಲಿವುಡ್ ನಟಿ ಇಶಾ ಧೂಪಿಯಾ ನಡೆಸಿಕೊಡುವ ಚಾಟ್ ಶೋದಲ್ಲಿ ಪಾಲ್ಗೊಂಡಿದ್ದ ಸೌರವ್ ಗಂಗೂಲಿ ತಮ್ಮ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ.
ಈಗಾಗಲೇ ಎಂ.ಎಸ್. ಧೋನಿ; ಸಿ ಅನ್ಟೋಲ್ಡ್ ಸ್ಟೋರಿ ಸಿನಿಮಾ ಬಾಲಿವುಡ್ನಲ್ಲಿ ದೊಡ್ಡ ಇತಿಹಾಸ ನಿರ್ಮಿಸಿದೆ. ಅದರ ಬೆನ್ನಲ್ಲೆ ಸೌರವ್ ಗಂಗೂಲಿ ಬಯೋಪಿಕ್ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಆದರೆ, ಯಾವುದೂ ಅಧಿಕೃತವಾಗಿರಲಿಲ್ಲ. ಈಗ ಆ ಬಗ್ಗೆ ಸ್ವತಃ ಸೌರವ್ ಮಾತನಾಡಿದ್ದಾರೆ.
‘ನಾನು ಇಲ್ಲಿಯವರೆಗೂ ಬಯೋಪಿಕ್ ಬಗ್ಗೆ ಮಾತನಾಡಿಲ್ಲ. ಆ ಬಗ್ಗೆ ವಿಚಾರಿಸಿಯೂ ಇಲ್ಲ. ಒಂದು ವೇಳೆ ಮಾಡುವುದೇ ನಿಜವಾದರೆ, ಹೃತಿಕ್ ರೋಷನ್ ಸೂಕ್ತ. ಆದರೆ, ಮೊದಲು ಅವರು ನನ್ನ ರೀತಿಯ ಬಾಡಿ ಬದಲಾಯಿಸಿಕೊಳ್ಳಬೇಕು. ಹೃತಿಕ್ ಫಿಸಕ್ ನೋಡಿ ಬಹುತೇಕರು ಅಚ್ಚರಿಗೊಳಪಟ್ಟಿದ್ದಾರೆ. ಅವರಂತೆ ಶರೀರ ಹೊಂದಬೇಕೆಂದುಕೊಂಡವರಿದ್ದಾರೆ’ ಎಂದು ನಗೆ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್)