

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ (MCA Stadium) ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯವು ಸಮಬಲ ಹೋರಾಟಕ್ಕೆ ಸಾಕ್ಷಿಯಾಗಲಿದ್ದು, ಮೂರನೇ ಪಂದ್ಯದ ಸೋಲಿನಿಂದ ಹೊರಬಂದು ಸರಣಿಯನ್ನು ವಶಪಡಿಸಿಕೊಳ್ಳಂಡು, ಪ್ರವಾಸಿ ತಂಡದ ಎದುರು ತಮ್ಮ ಪ್ರಾಬಲ್ಯವನ್ನು ಮುಂದುವರೆಸಲು ಸಜ್ಜಾಗಿದ್ದಾರೆ. ಇತ್ತ ಆಂಗ್ಲರು ಕೂಡ ಸಮಬಲದ ಹೋರಾಟ ನಡೆಸಿ ಸರಣಿಯನ್ನು ಜೀವಂತವಾಗಿರಿಸುವ ತವಕದಲ್ಲಿದೆ.
ಮೂರನೇ ಟಿ20ಯಲ್ಲಿ ಪುಟಿದೇಳುವ ಮೂಲಕ ಸರಣಿಯಲ್ಲಿ ಹಿನ್ನಡೆಯ ಅಂತರವನ್ನು ಪ್ರವಾಸಿ ತಂಡವು ತಗ್ಗಿಸಿಕೊಂಡಿದೆ. 2026ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಕಾಯಂಗೊಳಿಸಲು ಯುವ ಆಟಗಾರರಿಗೆ ಈ ಸರಣಿ ಆರಂಭಿಕ ವೇದಿಕೆ ಎನಿಸಿದೆ. ನಾಯಕ ಸೂರ್ಯಕುಮಾರ್ ಬ್ಯಾಟಿಂಗ್ ಫಾರ್ಮ್ ಕಳವಳಕಾರಿ ಎನಿಸಿದೆ. ರಿಂಕು ಸಿಂಗ್ ಗೈರಿನ ನಡುವೆ ಮಧ್ಯ ಕ್ರಮಾಂಕದಲ್ಲಿ ಸೂಕ್ತ ಫಿನಿಷರ್‌ಗಳ ಕೊರತೆ ತಂಡಕ್ಕೆ ಎದುರಾಗಿದ್ದು, ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಗಾಯಕ್ಕೆ ತುತ್ತಾಗಿ ಚೇತರಿಸಿಕೊಂಡಿರುವ ರಿಂಕು ಸಿಂಗ್ ನಾಲ್ಕನೇ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವುದು ಪಕ್ಕಾ ಆಗಿದ್ದು, ವೇಗಿ ಕಳೆದ ಪಂದ್ಯದಲ್ಲಿ ರೆಸ್ಟ್ ಪಡೆದಿದ್ದ ಅರ್ಷ್ದೀಪ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆಯುವುದು ಪಕ್ಕಾ ಆಗಿದೆ. ನಾಲ್ಕನೇ ಪಂದ್ಯದಲ್ಲಿ ಆತಿಥೇಯರು ಕೆಲವು ಬದಲಾವಣೆಗಳನ್ನು ಮಾಡಲಿದ್ದಾರೆ ಎಂದು ಹೇಳಲಾಗಿದ್ದು, ಧ್ರುವ್ ಜುರೆಲ್, ವಾಷಿಂಗ್ಟನ್ ಸುಂದರ್ ಹಾಗೂ ರವಿ ಬಿಷ್ಣೋಯಿರನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ. ಟಾಸ್ನ ಬಳಿಕ ಅಂತಿಮ ಚಿತ್ರಣ ಹೊರಬೀಳಲಿದೆ.
ಪಿಚ್ ವರದಿ: ಎಂಸಿಎ (MCA) ಪಿಚ್ ಸಾಮಾನ್ಯವಾಗಿ ಬೌಲರ್ಗಳಿಗೆ ಹಾಗೂ ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಟಾಸ್ ಗೆದ್ದ ತಂಡ ಚೇಸಿಂಗ್ಗೆ ಹೆಚ್ಚಿನ ಒಲವು ತೋರಲಿದ್ದು, ಪಂದ್ಯದ ವೇಳೆ ಇಬ್ಬನಿ ಪ್ರಮುಖ ಪಾತ್ರವಹಿಸಲಿದೆ. ಎಂಸಿಎಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ 2 ಬಾರಿ ಗೆದ್ದರೆ, ಚೇಸಿಂಗ್ ನಡೆಸಿದ ತಂಡ ಎರಡು ಬಾರಿ ಗೆಲುವು ಕಂಡಿದೆ.
ಆತಿಥೇಯರ ಅಸ್ಥಿರ ಬ್ಯಾಟಿಂಗ್: ಐದು ಪಂದ್ಯಗಳ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಿದರೂ, ಯುವ ಬ್ಯಾಟರ್‌ಗಳ ಅಸ್ಥಿರ ನಿರ್ವಹಣೆ ಕಳವಳಕಾರಿ ಎನಿಸಿದೆ. ಆರಂಭಿಕ ಸಂಜು ಸ್ಯಾಟ್ಸನ್ ವಿಫಲತೆ ಜತೆಗೆ ಸೂರ್ಯಕುಮಾರ್ ರನ್‌ಬರ ಎದುರಿಸಿದ್ದಾರೆ. ಇಂಗ್ಲೆಂಡ್ ವೇಗಿಗಳ ಶಾರ್ಟ್‌ಾಲ್ ಎದುರು ಸ್ಯಾಮ್ಸ್ನ್ ದೌರ್ಬಲ್ಯ ಹೊಂದಿದ್ದಾರೆ.ಕೋಚ್ ಗೌತಮ್ ಗಂಭೀರ್ ನಿರೀಕ್ಷೆಗೆ ತಕ್ಕ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಕೇರಳದ ಸಂಜು ಸ್ಯಾಮ್ಪನ್ ವಿಫಲತೆ ಕಂಡಿದ್ದಾರೆ. ಸರಣಿಗೆ ಮೀಸಲು ಆರಂಭಿಕ ಆಟಗಾರರನ್ನು ಆಯ್ಕೆ ಮಾಡದಿರುವುದರಿಂದ ಸ್ಯಾಟ್ಸನ್ ಸ್ಥಾನ ಖಾತ್ರಿ ಎನಿಸಿದೆ. ಆತಿಥೇಯರು ಗೆಲುವಿನ ಹಳಿಗೆ ಮರಳಲು ಬ್ಯಾಟಿಂಗ್ ವಿಭಾಗದಿಂದ ಸುಧಾರಿತ ನಿರ್ವಹಣೆ ಅತ್ಯಗತ್ಯವೆನಿಸಿದೆ.