IPL 2024: ಹೇಗಿದೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಬಲಾಬಲ?

web rcb web
Published on

ಬೆಂಗಳೂರು: ಈ ಸಲ ಕಪ್​ ನಮ್ದೇ ಎಂದು ಅಭಿಮಾನಿಗಳು ನಡೆದ 16 ವರ್ಷಗಳಿಂದ ಪ್ರೀತಿ ತೋರುತ್ತಿದ್ದರೂ ಕಪ್​ ಗೆಲ್ಲದೆ ನಿರಾಸೆ ಮೂಡಿಸುತ್ತಿದ್ದ ಆರ್​ಸಿಬಿ ತಂಡ ಇತ್ತೀಚೆಗೆ ಡಬ್ಲ್ಯುಪಿಎಲ್​ನಲ್ಲಿ ಮಹಿಳಾ ತಂಡ ಕಪ್​ ಗೆದ್ದು ಬೀಗಿರುವ ಸಾಧನೆಯಿಂದ ಸ್ಫೂರ್ತಿ ಪಡೆಯಬೇಕಾಗಿದೆ. ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಸರಣಿ ತಪ್ಪಿಸಿಕೊಂಡಿದ್ದರೂ, ವಿರಾಟ್​ ಕೊಹ್ಲಿ ಐಪಿಎಲ್​ಗೆ ಮರಳಿರುವುದು ಆರ್​ಸಿಬಿಗೆ ಪ್ರಮುಖ ಸಮಾಧಾನಕರ ವಿಷಯ. ಇದರಿಂದ ಆರ್​ಸಿಬಿ ತಂಡ ಈ ಸಲವೂ 'ಕೆಜಿಎಫ್​' (ಕೊಹ್ಲಿ, ಗ್ಲೆನ್​, ಫಾಫ್) ಬಲ ಉಳಿಸಿಕೊಂಡಂತಾಗಿದೆ.

ಆಸೀಸ್​ ಯುವ ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ರನ್ನು ಬರೋಬ್ಬರಿ 17 ಕೋಟಿ ರೂ.ಗೆ ಮುಂಬೈನಿಂದ ವರ್ಗಾವಣೆ ಮಾಡಿಕೊಂಡಿರುವುದು ಆರ್​ಸಿಬಿಗೆ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬುದನ್ನು ನೋಡಬೇಕಿದೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ಸಿರಾಜ್-ವೈಶಾಕ್​ ಹೊರತಾಗಿ ಬಹುತೇಕ ಹೊಸ ಸದಸ್ಯರಿದ್ದಾರೆ. ಫಾಫ್​ ಡು ಪ್ಲೆಸಿಸ್​ ಪಡೆಗೆ ಈ ಸಲವೂ ಬ್ಯಾಟಿಂಗ್​ ಪ್ರಮುಖ ಬಲವಾಗಿದೆ. ಆದರೆ ಸ್ಪಿನ್​ ಬೌಲಿಂಗ್​ ವಿಭಾಗದಲ್ಲಿ ಸ್ಟಾರ್ಸ್​ ಇಲ್ಲದಿರುವುದು ಹಿನ್ನಡೆಯಾಗಬಹುದು.

ತಂಡ: ಫಾಫ್​ ಡು ಪ್ಲೆಸಿಸ್​ (ನಾಯಕ), ವಿರಾಟ್​ ಕೊಹ್ಲಿ, ಮಹಿಪಾಲ್​ ಲೊಮ್ರೊರ್​, ಗ್ಲೆನ್​ ಮ್ಯಾಕ್ಸ್​ವೆಲ್​, ದಿನೇಶ್​ ಕಾರ್ತಿಕ್​, ಕ್ಯಾಮರಾನ್​ ಗ್ರೀನ್​, ರಜತ್​ ಪಾಟೀದಾರ್​, ಅನುಜ್​ ರಾವತ್​, ಸೌರವ್​ ಚೌವ್ಹಾಣ್​, ವಿಲ್​ ಜಾಕ್ಸ್​, ಸುಯಶ್​ ಪ್ರಭುದೇಸಾಯಿ, ಮನೋಜ್​ ಭಾಂಡಗೆ, ಮೊಹಮದ್​ ಸಿರಾಜ್​, ಆಕಾಶ್​ ದೀಪ್​, ಟಾಮ್​ ಕರನ್​, ಲಾಕಿ ಫಗ್ಯುರ್ಸನ್​, ಅಲ್ಜಾರಿ ಜೋಸೆಫ್​, ರಾಜನ್​ ಕುಮಾರ್​, ವೈಶಾಕ್​ ವಿಜಯ್​ ಕುಮಾರ್​, ಹಿಮಾಂಶು ಶರ್ಮ, ಕರ್ಣ್​ ಶರ್ಮ, ಸ್ವಪ್ನಿಲ್​ ಸಿಂಗ್​, ಯಶ್​ ದಯಾಳ್​, ರೀಸ್​ ಟಾಪ್ಲೆ, ಮಯಾಂಕ್​ ದಾಗರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net