ಮಾಜಿ ಕ್ರಿಕೆಟಿಗ​​ ಕಾಂಬ್ಳಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸೆ ಘೋಷಿಸಿದ ಆಸ್ಪತ್ರೆ | Vinod Kambli

dk (21) (1)
Published on

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ(Vinod Kambli) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಮತ್ತೊಂದು ಗಂಭೀರ ಖಾಯಿಲೆ ವಕ್ಕರಿಸಿದೆ ಅದುವೇ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವರಿಯಾಗಿದೆ.

ಸದ್ಯಕ್ಕೆ ಮಹಾರಾಷ್ಟ್ರದ ಥಾಣಾದ ಆಕೃತಿ ಆಸ್ಪತ್ರೆಯಲ್ಲಿ ಕಾಂಬ್ಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಆಕೃತಿ ಆಸ್ಪತ್ರೆಯ ಡಾ.ವಿವೇಕ್​ ತ್ರಿವೇದಿ, ಕಾಂಬ್ಳೆ ಅವರ ಜೀವನ ಪರ್ಯಂತ ಚಿಕಿತ್ಸೆ ಉಚಿತವಾಗಿರುತ್ತಿದೆ ಎಂದು ಘೋಷಿಸಿದರು.

ಆಸ್ಪತ್ರೆಯ ಉಸ್ತುವಾರಿ ಎಸ್​.ಸಿಂಗ್​ ಅವರು ಉಚಿತ ಚಿಕಿತ್ಸೆಯ ನೀಡುವ ಬಗ್ಗೆ ನಿರ್ಧಾರ ಮಾಡಿದ್ದಾರೆ ಎಂದು ಅವರು ತಿಳಿಸಿದ ಅವರು, ಕಾಂಬ್ಳೆ ಚಿಕಿತ್ಸೆ ಬಗ್ಗೆ ಯಾರು ಯೋಚಿಸುವಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೀಗ ಉಚಿತ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಂಡಿರುವ ಉಸ್ತುವಾರಿ ಸಿಂಗ್​ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೂತ್ರದ ಸೋಂಕು ಮತ್ತು ಕಾಲು ಸೆಳೆತದಿಂದ ಕಾಂಬ್ಬಿ ಆಸ್ಪತ್ರೆಗೆ ದಾಖಲಾದ ನಂತರ, ಆಸ್ಪತ್ರೆಯ ಸಿಬ್ಬಂದಿ ಅವರಿಗೆ ಹಲವಾರು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಕಾಂಬ್ಳೆ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ. ಇಂದು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಡಾ.ವಿವೇಕ್ ತ್ರಿವೇದಿ ತಿಳಿಸಿದ್ದಾರೆ.

ಸದ್ಯ ಕಾಂಬ್ಳೆ ಆರೋಗ್ಯ ಸ್ಥಿರವಾಗಿದೆ. ಆದರೆ, ಕಾಂಬ್ಬಿ ಅವರು ಐಸಿಯುನಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕು ಎಂದು ಡಾ.ವಿವೇಕ್​ ತ್ರಿವೇದಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net