ಪಾಂಟಿಂಗ್​ ಬೆನ್ನಲ್ಲೇ ಗಂಗೂಲಿಗೂ ಶಾಕ್​ ನೀಡಿದ Delhi Capitals; ನೂತನ ಕೋಚ್, ಡೈರೆಕ್ಟರ್​ ನೇಮಿಸಿದ ಫ್ರಾಂಚೈಸಿ

Ponting Ganguly
Published on

ನವದೆಹಲಿ: 18ನೇ ಆವೃತ್ತಿಯ ಐಪಿಎಲ್​ಗೆ (IPL) ಸಂಬಂಧಿಸಿದ ತಯಾರಿಗಳು ಈಗಾಗಲೇ ಭರದಿಂದ ಸಾಗಿದ್ದು, 2025ರಲ್ಲಿ ನಡೆಯಲಿರುವ ಈ ಟೂರ್ನಿಯು ಈಗಿನಿಂದಲೇ ಸದ್ದು ಮಾಡಲು ಶುರು ಮಾಡಿದೆ. ಈಗಾಗಲೇ ರಿಟೇನ್​ (Retain) ನಿಯಮಗಳನ್ನು ಬಿಡುಗಡೆ ಮಾಡಲಾಗಿದ್ದು, ಫ್ರಾಂಚೈಸಿಗಳು (Franchise) ಪಟ್ಟಿ ಸಲ್ಲಿಸಿದ ಬಳಿಕ ವರ್ಷಾಂತ್ಯದಲ್ಲಿ ಮೆಗಾ ಹರಾಜು ನಡೆಯಲಿದೆ. ಇದೀಗ 18ನೇ ಆವೃತ್ತಿಯಲ್ಲಿ ಕಪ್​ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ (Delhi Capitals) ತಯಾರಿ ನಡೆಸುತ್ತಿದ್ದು, ಅದಕ್ಕೆ ಮುನ್ನುಡಿ ಎಂಬಂತೆ ತಂಡಕ್ಕೆ ನೂತನ ಕೋಚ್ (Coach)​ ಹಾಗೂ ನಿರ್ದೇಶಕರನ್ನು (Director) ನೇಮಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನೂತನ ಮುಖ್ಯಕೋಚ್‌ (Delhi Capitals Head Coach) ಆಗಿ ಹೇಮಂಗ್ ಬದಾನಿ (Hemang Badani) ಹಾಗೂ ಕ್ರಿಕೆಟ್‌ ನಿರ್ದೇಶಕರಾಗಿ ವೇಣುಗೋಪಾಲ್ ರಾವ್ (Venugopal Rao) ನೇಮಕಗೊಂಡಿದ್ದಾರೆ. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಅಧಿಕೃತ ಘೋಷಣೆ ಮಾಡಿದೆ.

17ಆವೃತ್ತಿ ಕಳೆದರೂ ಐಪಿಎಲ್‌ ಟ್ರೋಫಿ (IPL Trophy) ತಂದುಕೊಡುವಲ್ಲಿ ವಿಫಲರಾದ ರಿಕಿ ಪಾಟಿಂಗ್‌ (Ricky Ponting) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಫ್ರಾಂಚೈಸಿ ಮುಖ್ಯ ಕೋಚ್‌ ಹುದ್ದೆಯಿಂದ ವಜಾಗೊಳಿಸಿತ್ತು. ಈ ಬೆನ್ನಲ್ಲೇ ಮುಖ್ಯಕೋಚ್‌ (Head Coach) ಹುದ್ದೆಗೆ ಸೌರವ್‌ ಗಂಗೂಲಿ (Sourav Ganguly) ಅವರ ಹೆಸರು ಕೇಳಿಬಂದಿತ್ತು. ಆದರೆ ಅಚ್ಚರಿ ಎಂಬಂತೆ ಹೇಮಂಗ್‌ ಬದಾನಿ (Hemang Badani) ಅವರನ್ನು ಮುಖ್ಯಕೋಚ್‌ (Head Coach) ಆಗಿ ನೇಮಿಸಲಾಗಿದೆ. ಸೌರವ್‌ ಗಂಗೂಲಿ (Saurav Ganguly) ಅವರ ಬದಲಿಗೆ ಕ್ರಿಕೆಟ್‌ ನಿರ್ದೇಶಕರನ್ನಾಗಿ ವೇಣುಗೋಪಾಲ್ ರಾವ್ (Venugopal Rao) ಅವರನ್ನ ಫ್ರಾಂಚೈಸಿ ನೇಮಿಸಿದೆ.

ಚೆನ್ನೈ ಮೂಲದವರಾದ ಹೇಮಂಗ್​ ಬದಾನಿ ಟೀಮ್​ ಇಂಡಿಯಾ (Team India) ಪರ 4 ಟೆಸ್ಟ್​, 40 ಏಕದಿನ ಪಂದ್ಯಗಳನ್ನಾಡಿದ್ದಾರೆ. 2021-23 ರವರೆಗೆ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hydrebad) ತಂಡದ ಫೀಲ್ಡಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಜಾಫ್ನಾ ಕಿಂಗ್ಸ್ (Jafna Kings) ಫ್ರಾಂಚೈಸಿ ಕೋಚ್‌ ಆಗಿ ತಂಡಕ್ಕೆ 2 ಪ್ರಶಸ್ತಿಗಳನ್ನ ತಂದುಕೊಟ್ಟಿದ್ದಾರೆ. SA20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲೇ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ (Sunrisers Eastern Cape) ತಂಡದ ಬ್ಯಾಟಿಂಗ್ ಕೋಚ್ (Batting Coach) ಆಗಿ ಪ್ರಶಸ್ತಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಈ ವರ್ಷದ ILT20 ನಲ್ಲಿ ದುಬೈ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಇವರ ನೇತೃತ್ವದಲ್ಲೇ ದುಬೈ ಕ್ಯಾಪಿಟಲ್ಸ್‌ (Dubai Capitals) ತಂಡ ಫೈನಲ್‌ ತಲುಪಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ (Dehi Capitals) ಮುಖ್ಯಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ನೂತನ ಕೋಚ್​ ಹೇಮಂಗ್​ ಬದಾನಿ, ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಫ್ರಾಂಚೈಸಿ ಸೇರುತ್ತಿರುವುದು ನನಗೆ ಹೆಮ್ಮೆ ಎನಿಸಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಮ್ಮ ಮಾಲೀಕರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net