46 ಅಲ್ಲ 36ಕ್ಕೆ ಆಲೌಟ್​ ಆಗಿದ್ರು…Team Indiaವನ್ನು ಟ್ರೋಲ್​ ಮಾಡಿದ ಆಸ್ಟ್ರೇಲಿಯಾದ ಮಾಧ್ಯಮಗಳು

Team India

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand)​ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯಾದ (Team India) ಕಳಪೆ ಪ್ರದರ್ಶನ ತೋರುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದು, ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡ್ಡಿದೆ. ಇನ್ನೂ ಟೀಮ್​ ಇಂಡಿಯಾದ (Team India) ಈ ಕಳಪೆ ಪ್ರದರ್ಶನವನ್ನು ತೀವ್ರವಾಗಿ ಟೀಕಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ (Cricket Australia) ಹಾಗೂ ಅಲ್ಲಿನ ಮಾಧ್ಯಮಗಳು 46 ಅಲ್ಲ 36ಕ್ಕೆ ತಂಡ ಆಲೌಟ್​ ಆಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋವನ್ನು ಪೋಸ್ಟ್​ ಮಾಡಿದೆ. ಇದು ಭಾರತೀಯ ಅಭಿಮಾನಿಗಳ (Indian Fans) ಕೆಂಗಣ್ಣಿಗೆ ಗುರಿಯಾಗಿದೆ.

ಬಾಂಗ್ಲಾದೇಶ (Bangladesh) ವಿರುದ್ಧದ ಟೆಸ್ಟ್​ ಸರಣಿಯಲ್ಲಿ (Test Series) ಕ್ಲೀನ್​ಸ್ವೀಪ್​ ಮಾಡುವ ಮೂಲಕ ಆತ್ಮವಿಶ್ವಾಸದಲ್ಲಿದ್ದ ಭಾರತ (Team India) ತಂಡವು ನ್ಯೂಜಿಲೆಂಡ್​ (NewZealand) ವಿರುದ್ಧವೂ ಅದೇ ಜೋಷ್​ನಲ್ಲಿ ಕಣಕ್ಕಿಳಿಯಿತು. ಆದರೆ, ಹಾಕಿಕೊಂಡಿದ್ದ ಲೆಕ್ಕಾಚಾರವೆಲ್ಲವೂ ಉಲ್ಟಾ ಆಗಿದ್ದು, ಟೀಮ್​ ಇಂಡಿಯಾವನ್ನು (Team India) ಬಗ್ಗುಬಡಿಯುವಲ್ಲಿ ಕಿವೀಸ್​ ಪಡೆ ಯಶಸ್ವಿಯಾಗಿದೆ. ಕಳಪೆ ಪ್ರದರ್ಶನದ ಬಗ್ಗೆ ಭಾರತ ತಂಡವನ್ನು (Team India) ತೀವ್ರವಾಗಿ ಟೀಕಿಸಲಾಗುತ್ತಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: Dhoni ಬೇಡ ಈತನನ್ನು ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿ ರಿಟೇನ್​ ಮಾಡಿ; ಸಿಎಸ್​ಕೆಗೆ ಸಲಹೆ ನೀಡಿದ Team India ಸ್ಟಾರ್​ ಆಟಗಾರ

2020ರಲ್ಲಿ ನಡೆದಿದ್ದ ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲಿ (Border-Gavaskar Trophy) ಭಾರತ ತಂಡವು (Team India) ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಅಡಿಲೇಡ್​ನಲ್ಲಿ (Adelaide) ನಡೆದ ಟೆಸ್ಟ್​ ಸರಣಿಯ (Test Series) ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯವಾಗಿ ಸೋಲುಂಡಿತ್ತು. ಇದರಲ್ಲಿ ಪ್ರಮುಖವಾಗಿ ಭಾರತ (Team India) 36 ರನ್​ಗಳಿಗೆ ಆಲೌಟ್​ ಆಗಿತ್ತು. ಈ ವಿಡಿಯೋವನ್ನು ಕ್ರಿಕೆಟ್​ ಆಸ್ಟ್ರೇಲಿಯಾ (Cricket Australia) ಸೋಶಿಯಲ್​ ಮೀಡಿಯಾದಲ್ಲಿ (Social Media) ಪೋಸ್ಟ್​ ಮಾಡುವ ಮೂಲಕ ಟೀಮ್​ ಇಂಡಿಯಾವನ್ನು (Team India) ಟೀಕಿಸಿದೆ. ಆದರೆ, ಅಡಿಲೇಡ್​ನಲ್ಲಿ ಉಂಟಾದ ಸೋಲಿನಿಂದ ಪುಟಿದೆದ್ದ ಭಾರತ ತಂಡವು ಆಸ್ಟ್ರೇಲಿಯಾದವರನ್ನು (Australia) ಅವರ ನೆಲದಲ್ಲೇ ಬಗ್ಗು ಬಡಿಯುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತ್ತು. ಈ ವಿಚಾರವನ್ನು ಮರೆತು ಕ್ರಿಕೆಟ್​ ಆಸ್ಟ್ರೇಲಿಯಾ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ಭಾರತೀಯ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 25ನೇ ಟೆಸ್ಟ್​ ಪಂದ್ಯ ಇದಾಗಿದ್ದು, ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದರು. ಭಾರತ 31.2 ಓವರ್‌ಗಳಲ್ಲಿ 46 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ (Team India) ಐವರು ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆದರು. ನ್ಯೂಜಿಲೆಂಡ್ (NewZealand) ಪರ ಮ್ಯಾಟ್ ಹೆನ್ರಿ ಐದು (15/5) ಮತ್ತು ವಿಲಿಯಂ ಒ ರೂರ್ಕಿ (22/4) ನಾಲ್ಕು ವಿಕೆಟ್ ಸಾಧನೆ ಮಾಡಿದರು. ಇನ್ನೂ ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಮುನ್ನಡೆ ಪಡೆದಿರುವ ನ್ಯೂಜಿಲೆಂಡ್​ ಮೊದಲ ಪಂದ್ಯ ಗೆಲ್ಲುವ ಮುನ್ಸೂಚನೆ ನೀಡಿದೆ.

Share This Article

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…

ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್​ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars

Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…

ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್​ ಮಾಡೋದೆ ಇಲ್ಲ | Health Tips

ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…