ಎಬಿಡಿ, ಗೇಲ್​, ಕೊಹ್ಲಿ... ಸ್ಫೋಟಕ ಇನ್ನಿಂಗ್ಸ್​ ನೀಡಿದ ಕ್ರಿಕೆಟಿಗನಿಗೆ ಆರ್​ಸಿಬಿ ದಿಗ್ಗಜರ ಸಾಲಿನಲ್ಲಿ ಸ್ಥಾನ! | RCB vs CSK

ವಿಜಯವಾಣಿ - 2025-05-04T130736.492
Published on

RCB vs CSK: ಮೇ.3ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB ) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ( CSK ) ನಡುವಿನ ರಣರೋಚಕ ಪಂದ್ಯದಲ್ಲಿ ಕೇವಲ 2 ರನ್‌ಗಳಿಂದ ಆರ್​ಸಿಬಿ ತವರಿನಲ್ಲಿ ಗೆದ್ದು ಬೀಗಿತು. ಕೊನೆ ಎಸೆತದವರೆಗೂ ಸಖತ್​ ಪೈಪೋಟಿ ನೀಡಿದ ಚೈನ್ನೈ ಬ್ಯಾಟರ್ಸ್​ ಅಂತಿಮವಾಗಿ ಮತ್ತೊಂದು ಸೋಲಿಗೆ ಶರಣಾಯಿತು. ಈ ಒಂದು ಪಂದ್ಯದಲ್ಲಿ ಎರಡು ತಂಡಗಳ ಆಟಗಾರರಿಂದ ಅದ್ಭುತ ಪ್ರದರ್ಶನ ಮೂಡಿಬಂದಿದ್ದು, ಓರ್ವ ಮಾತ್ರ ಆರ್​ಸಿಬಿ ದಿಗ್ಗಜರನ್ನು ನೆನಪಿಸಿರುವುದು ಮುನ್ನೆಲೆಗೆ ಬಂದಿದೆ.

ಕೇವಲ 14 ಬಾಲ್​ಗಳಲ್ಲಿ 53 ರನ್​ ಸಿಡಿಸುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಎರಡನೇ ಕ್ರಿಕೆಟಿಗ ಎಂಬ ದಾಖಲೆಗೆ ವೆಸ್ಟ್​ ಇಂಡೀಸ್​ ಸ್ಫೋಟಕ ಬ್ಯಾಟರ್​ ರೊಮಾರಿಯೊ ಶೆಫರ್ಡ್ ಸಾಕ್ಷಿಯಾದರು. ಖಲೀಲ್​ ಅಹ್ಮದ್​ ಬೌಲಿಂಗ್​ನಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ ರೊಮಾರಿಯೊ, ಸ್ಫೋಟಕ ಇನ್ನಿಂಗ್ಸ್​ ನೀಡುವುದರ ಜತೆಗೆ ಆಟದ ದಿಕ್ಕನೇ ಬದಲಿಸಿದರು. ಶೆಫರ್ಡ್​ ಅಬ್ಬರದ ಬ್ಯಾಟಿಂಗ್​ ಮತ್ತು ದಾಖಲೆಯನ್ನು ಆರ್​ಸಿಬಿ ದಿಗ್ಗಜರೊಂದಿಗೆ ಹೋಲಿಸಿ ಮಾತನಾಡಿದ ಕಮೆಂಟೇಟರ್​ ಅನಂತ್ ತ್ಯಾಗಿ, "ಈತ ಕೂಡ ಕ್ರೀಸ್​ ಗೇಲ್​, ಎಬಿಡಿ ಮತ್ತು ಕೊಹ್ಲಿಯಂತೆ" ಎಂದು ಹೇಳಿದ್ದಾರೆ.

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿಯ ಘರ್ಜನೆ ಸಿಕ್ಕಿರುವುದು ವಿರಾಟ್​ ಕೊಹ್ಲಿ, ಎಬಿ ಡಿವಿಲಿಯರ್ಸ್​ ಮತ್ತು ಕ್ರೀಸ್​ ಗೇಲ್​ಗೆ ಮಾತ್ರ. ಆ ನಂತರದಲ್ಲಿ ಈಗ ರೊಮೊರಿಯೊ ಶೆಫರ್ಡ್​ ಸೇರ್ಪಡೆಯಾಗಿದ್ದಾರೆ. ಆರ್​ಸಿಬಿ ಅಭಿಮಾನಿಗಳಿಂದ ಇಂತಹ ಭವ್ಯ ಸ್ವಾಗತ, ಬೆಂಬಲ ಸ್ವೀಕರಿಸಿದ ಆಟಗಾರ ಇವರು" ಎಂದರು. ತ್ಯಾಗಿ ಮಾತನ್ನು ಒಪ್ಪಿದ ಸುರೇಶ್​ ರೈನಾ, "ಹೌದು, ನೀವೇಳಿದ್ದು ಸರಿಯಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್​ಗೆ ಹಲವಾರು ಪಂದ್ಯಗಳನ್ನು ಗೆದ್ದು ಕೊಟ್ಟಿರುವ ಕಿರಾನ್ ಪೋಲಾರ್ಡ್​. ಎಂಐ ಪರ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಈಗ ಅವರಂತೆಯೇ ಶೆಫರ್ಡ್​ ಕೂಡ ಆರ್​ಸಿಬಿಗೆ ಆಡ್ತಿದ್ದಾರೆ" ಎಂದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net