ಕೇವಲ 4 ಶತಕ ಸಾಕು... ಟೀಮ್ ಇಂಡಿಯಾ ಬ್ಯಾಟರ್ ಕುರಿತು ಸುನಿಲ್ ಗವಾಸ್ಕರ್​ ಭರವಸೆ

ವಿಜಯವಾಣಿ - 2024-12-12T134753.209
Published on

ನವದೆಹಲಿ: ಪ್ರಸ್ತುತ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್​ ಪಂದ್ಯಗಳಲ್ಲಿ ಎರಡು ಮ್ಯಾಚ್​ ಮುಗಿಸಿರುವ ಭಾರತ, 1-1 ಅಂತರದಲ್ಲಿದೆ. ಮೊದಲನೇ ಪಂದ್ಯವನ್ನು ಗೆದ್ದಿದ್ದ ಟೀಮ್ ಇಂಡಿಯಾ, ಎರಡನೇ ಮ್ಯಾಚ್​ನಲ್ಲಿ 10 ವಿಕೆಟ್​ಗಳಿಂದ ಗೆಲುವನ್ನು ಕಳೆದುಕೊಂಡಿತು. ಒಂದೆಡೆ ಸರಣಿ ಗೆಲುವಿನ ಮೇಲೆ ಕ್ರಿಕೆಟ್ ಪ್ರಿಯರ ಭರವಸೆಯಿದ್ದರೆ, ಮೊತ್ತೊಂದೆಡೆ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮೇಲೆ ಅಪಾರ ನಿರೀಕ್ಷೆಗಳು ಮೂಡಿವೆ.

ಆಸ್ಟ್ರೇಲಿಯಾದ ಪರ್ತ್​, ಆಡಿಲೇಡ್ ಓವಲ್ ನೆಲದಲ್ಲಿ ವಿದೇಶಿ ಆಟಗಾರರ ಶತಕ ದಾಖಲೆಯಲ್ಲಿ ಸದ್ಯ ವಿರಾಟ್ ಕೇವಲ​ ಮೂರು ಶತಕಗಳ ಸನ್ನಿಹಿತದಲ್ಲಿದ್ದಾರೆ. ಈ ಗುರಿಯನ್ನು ಅತಿ ಶೀಘ್ರವೇ ವಿರಾಟ್ ದಾಖಲಿಸಲಿ, ಶತಕಗಳ ಸರದಾರನಾಗಿ ಮಿಂಚಲಿ ಎಂಬುದು ಅಪಾರ ಕ್ರಿಕೆಟ್ ಪ್ರಿಯರ ಆಶಯ. ಆದ್ರೆ, ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಎರಡನೇ ಮ್ಯಾಚ್​ನಲ್ಲಿ ಅಭಿಮಾನಿಗಳ ನಿರೀಕ್ಷೆಯನ್ನು ತಲುಪುವಲ್ಲಿ ಎಡವಿದರು. ಇದು ಕೆಲವರಿಗೆ ಬೇಸರ ಮೂಡಿಸಿದ್ದೇ ಆದರೂ ಮುಂದಿನ ಪಂದ್ಯಗಳಲ್ಲಿ ಚೆನ್ನಾಗಿ ಆಡ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕ್ರಿಕೆಟ್ ದಂತಕಥೆ, ಹಿರಿಯ ಮಾಜಿ ಆಟಗಾರ ಸುನಿಲ್ ಗವಾಸ್ಕರ್​ ಮಾತನಾಡಿ, ಈ ದಾಖಲೆಯನ್ನು ವಿರಾಟ್ ಅತೀ ಶೀಘ್ರವೇ ಮಾಡಿ ಮುಗಿಸಬಹುದು ಎಂದು ಹೇಳಿದ್ದಾರೆ.

ಹೆಚ್ಚಿನ ಕೌಶಲ್ಯವಿದೆ

"ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ನಾಲ್ಕು ಶತಕಗಳೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ಅನ್ನು ಆಸ್ಟ್ರೇಲಿಯಾ ವಿರುದ್ಧ ಪೂರ್ಣಗೊಳಿಸಬಹುದು. ಮುಂದಿನ ಮ್ಯಾಚ್​ನಲ್ಲಿ ಶತಕ ಬಾರಿಸುವ ವಿಶ್ವದ ಇತರೆ ಬ್ಯಾಟರ್​ಗಳಿಗಿಂತ ಹೆಚ್ಚಿನ ಕೌಶಲ್ಯಗಳನ್ನು ಕೊಹ್ಲಿ ಹೊಂದಿದ್ದಾರೆ. ಐದು ಟೆಸ್ಟ್ ನಡೆಯುವ ನೆಲದಲ್ಲಿ ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ನನ್ನನ್ನು ಮತ್ತು ಇಂಗ್ಲೆಂಡ್ ಮಾಜಿ ನಾಯಕ ಅಲಸ್ಟೈರ್ ಕುಕ್​ರನ್ನು ವಿರಾಟ್​ ಸೇರಬಹುದು. ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯುವ ಅಂತಿಮ ಎರಡು ಟೆಸ್ಟ್‌ಗಳಲ್ಲಿ ಕೊಹ್ಲಿ ಶತಕಗಳನ್ನು ಗಳಿಸಬಹುದು" ಎಂದು ಗವಾಸ್ಕರ್​ ಅಭಿಪ್ರಾಯಿಸಿದ್ದಾರೆ.

ಮೂರನೇ ಬ್ಯಾಟರ್

''ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಬಾರಿಸಿದರೆ ಟೀಂ ಇಂಡಿಯಾಗೆ ಹೆಚ್ಚು ಸಹಾಯವಾಗುತ್ತದೆ. ಬ್ರಿಸ್ಬೇನ್‌ನಲ್ಲಿ ಸೆಂಚುರಿ ಗಳಿಸಿದರೆ ಎಲೈಟ್ ಕ್ಲಬ್‌ಗೆ ಅವರು ಸೇರ್ಪಡೆಯಾಗುತ್ತಾರೆ. ಈ ದಾಖಲೆಯನ್ನು ಕಾಂಗರೂ ಪಡೆಯ ನೆಲದಲ್ಲಿ ಬರೆದ ವಿದೇಶಿಯ ಮೂರನೇ ಬ್ಯಾಟರ್ ಆಗಿ ವಿರಾಟ್​ ಹೊರಹೊಮ್ಮಲಿದ್ದಾರೆ. ಬಾರ್ಡರ್​ ಗವಾಸ್ಕರ್ ಟ್ರೋಫಿಯ ಪ್ರವಾಸವನ್ನು ನಾಲ್ಕು ಶತಕಗಳೊಂದಿಗೆ ಪೂರ್ಣಗೊಳಿಸುವ ಅವಕಾಶವನ್ನು ಕೊಹ್ಲಿ ಹೊಂದಿದ್ದಾರೆ" ಎಂದು ಸುನಿಲ್ ಗವಾಸ್ಕರ್​ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net