ಗೌರವ ಕೊಡಿ, ಅವರು ಪಾಕಿಸ್ತಾನದ ಕ್ಯಾಪ್ಟನ್​! ಸುದ್ದಿಗಾರರ ಪ್ರಶ್ನೆಗೆ ಸಿಡಿದೆದ್ದ ಮ್ಯಾನೇಜ್​ಮೆಂಟ್​

pakistan captain
Published on

ಲಾಹೋರ್​: ಪಾಕಿಸ್ತಾನದ (Pakistan) ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಕಳಪೆ ಸೋಲನ್ನು ಪಾಕ್ ಎಂದಿಗೂ ದಾಖಲಿಸಿರಲಿಲ್ಲ. ತವರಿನಲ್ಲೇ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತ ಶಾನ್ ಮಸೂದ್ (Captain Shan Masood) ನಾಯಕತ್ವದ ಪಾಕ್​ ತಂಡ, ಅಂದಿನಿಂದ ಇಂದಿನವರೆಗೂ ಸಾಲು ಸಾಲು ಟೀಕೆ, ಅವಮಾನಗಳಿಗೆ ಗುರಿಯಾಗಿದೆ. ಇನ್ನು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಶಾನ್​ಗೆ ಇದೇ ವಿಷಯವನ್ನು ವ್ಯಂಗ್ಯವಾಗಿ ಕೇಳಿದ ಸುದ್ದಿಗಾರನಿಗೆ ಪಾಕ್​ ಮ್ಯಾನೇಜ್​ಮೆಂಟ್​ ಖಡಕ್​ ವಾರ್ನಿಂಗ್ ರವಾನಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿದ್ದ ಪಾಕಿಸ್ತಾನ ಕ್ರಿಕೆಟ್ ಕ್ಯಾಪ್ಟನ್​ ಶಾನ್ ಮಸೂದ್​, ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಈ ವೇಳೆ ಪತ್ರಕರ್ತರೊಬ್ಬರು ವ್ಯಂಗ್ಯವಾಗಿ ಕೇಳಿದ ಪ್ರಶ್ನೆಯನ್ಜು ಆಲಿಸಿದ ಪಿಸಿಬಿ ಮೀಡಿಯಾ ಮ್ಯಾನೇಜರ್ ಸಮಿ ಉಲ್ ಹಸನ್, ತಕ್ಷಣವೇ ಅಲ್ಲೇ ಎದ್ದುನಿಂತು, ನಿಮ್ಮಲ್ಲಿ ಒಂದೇ ಒಂದು ಮನವಿ, ಇಂತಹ ಪ್ರಶ್ನೆಗಳನ್ನು ಕೇಳಬೇಡಿ. ದಯವಿಟ್ಟು ಕ್ಯಾಪ್ಟನ್​ಗೆ ಮೊದಲು ಗೌರವ ಕೊಡಿ ಎಂದು ವಾರ್ನಿಂಗ್ ಕೊಟ್ಟರು. ಈ ದೃಶ್ಯದ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ.

ಶಾನ್​ ಮಸೂದ್​ಗೆ ಕೇಳಿದ ಪ್ರಶ್ನೆಯೇನು?

"ನೀವು ಹೇಳ್ತೀರಿ, ಪಾಕಿಸ್ತಾನ ತಂಡದ ಆಟಗಾರನಾಗಿ ಹಾಗೂ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸುವ ಅವಕಾಶ ನನಗೆ ಸಿಕ್ಕಿದೆ ಎಂದು. ಆದ್ರೆ, ನಿಮ್ಮ ಮನಸಾಕ್ಷಿಗೆ ಅನಿಸುತ್ತಿಲ್ಲವೇ ಈ ಸರಣಿ ಸೋಲುಗಳು ನನ್ನ ಆತ್ಮಗೌರವಕ್ಕೆ ಧಕ್ಕೆ ತಂದಿದೆ. ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗ್ತಿಲ್ಲ, ಆಟವನ್ನು ತ್ಯಜಿಸಿ ಹೋಗಬೇಕು ಅಂತ" ಎಂದು ಪತ್ರಕರ್ತರು ಶಾನ್​ಗೆ ಪ್ರಶ್ನಿಸಿದರು. ಇದಕ್ಕೆ ಕ್ಯಾಪ್ಟನ್​ ಉತ್ತರಿಸುವ ಮುನ್ನವೇ ಸಮಿ ಉಲ್ ಹಸನ್ ಮಧ್ಯೆಪ್ರವೇಶಿಸಿ, ಈ ರೀತಿ ಕೇಳಬೇಡಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net