ಇದೇನಾದರೂ ಸಂಭವಿಸಿದ್ರೆ ಜನ ನಿಮ್ಮ IPL​ ನೋಡೋದೇ ಬಿಡ್ತಾರೆ: ಹಸನ್​ ಅಲಿ ಟೀಕೆ

ವಿಜಯವಾಣಿ - 2025-04-10T085231.123
Published on

IPL: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿಯ ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್​, ಗುಜರಾತ್ ಟೈಟನ್ಸ್​, ಪಂಜಾಬ್​ ಕಿಂಗ್ಸ್​, ಕೋಲ್ಕತ ನೈಟ್​ ರೈಡರ್ಸ್​, ರಾಜಸ್ಥಾನ ರಾಯಲ್ಸ್ ತಂಡಗಳು ಉತ್ತಮ ಆಲ್​ರೌಂಡ್ ಪ್ರದರ್ಶನ ಮೂಲಕ ಅಂಕಪಟ್ಟಿಯಲ್ಲಿ ಮಿಂಚುತ್ತಿದೆ.

ಕೇವಲ ಭಾರತೀಯ ಕ್ರಿಕೆಟ್​ ಪ್ರಿಯರು ಮಾತ್ರವಲ್ಲದೇ ಇತರೆ ದೇಶಗಳಲ್ಲಿಯೂ ಸಹ ಐಪಿಎಲ್​ ನೋಡುವವರ ಸಂಖ್ಯೆ ಹೆಚ್ಚಿದೆ. ಆಯಾ ಫ್ರಾಂಚೈಸಿಗಳ ಫ್ಯಾನ್ಸ್​ ಹೊರ ದೇಶಗಳಲ್ಲಿಯೂ ಇದ್ದಾರೆ ಎಂಬುದು ಹುಬ್ಬೇರಿಸುವ ಸಂಗತಿ. ಈ ಮಧ್ಯೆ ಐಪಿಎಲ್​ ಕುರಿತು ಮಾತನಾಡಿರುವ ಪಾಕಿಸ್ತಾನದ ವೇಗಿ ಹಸನ್ ಹಲಿ, ಭಾರತೀಯ ಐಪಿಎಲ್​ಗಿಂತಲೂ ಹೆಚ್ಚಾಗಿ ಜನರು ಪಿಎಸ್​​ಎಲ್​ನ ನೋಡುತ್ತಾರೆ ಎಂದಿದ್ದಾರೆ.

ಇದೇ ಏ.11ರಿಂದ ಆರಂಭವಾಗಲಿರುವ ಪಾಕಿಸ್ತಾನ ಸೂಪರ್​​ ಲೀಗ್​ಗೆ ಅಧಿಕೃತ ಚಾಲನೆ ಸಿಗಲಿದ್ದು, ಇಸ್ಲಾಮಾಬಾದ್​ ಯುನೈಟೆಡ್​ ಮತ್ತು ಲಾಹೋರ್​ ಕ್ವಾಲೆಂಡರ್ಸ್​ ತಂಡಗಳು ಶುಭಾರಂಭ ಪಂದ್ಯದಲ್ಲಿ ಮುಖಾಮುಖಿಯಾಗಿ ಸೆಣಸಲಿವೆ. ಈ ವಿಷಯವನ್ನು ಮುಂದಿಟ್ಟು ಐಪಿಎಲ್​ ಅನ್ನು ಟೀಕಿಸಿದ ಅಲಿ, "ನಮ್ಮಲ್ಲಿ ಉತ್ತಮ ಪ್ರದರ್ಶನಗಳು ಕಾಣಲು ಸಿಕ್ಕರೆ ಎಲ್ಲರೂ ಪಿಎಸ್​ಎಲ್​ನ ಮಾತ್ರ ನೋಡುತ್ತಾರೆ. ಆಗ ಐಪಿಎಲ್​ಗೆ ಕಿಮ್ಮತ್ತು ಇರೋದಿಲ್ಲ" ಎಂದು ಹೇಳಿದ್ದಾರೆ.

"ಪಿಎಸ್​ಎಲ್​ ಮತ್ತು ಐಪಿಎಲ್​ ನಡುವೆ ದೊಡ್ಡ ಸಮರವಿದೆ. ಅದು ವೀಕ್ಷಕರ ವಿಷಯದಲ್ಲಿ. ಉತ್ತಮ ಪ್ರದರ್ಶನ ಮತ್ತು ಮನರಂಜನಾತ್ಮಕ ಅಂಶಗಳು ಮಾತ್ರ ನೋಡುಗರನ್ನು ಸೆಳೆಯಲು ಸಾಧ್ಯ. ಇದು ಸಂಭವಿಸಿದರೆ ವೀಕ್ಷಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ನಾವು ಅತ್ಯುತ್ತಮವಾಗಿ ಆಡಿದರೆ ಖಂಡಿತ ಜನ ಐಪಿಎಲ್​ನ ಮರೆತು ಬಿಡುತ್ತಾರೆ. ಸದ್ಯದ ಮಟ್ಟಿಗೆ ಇದೆಲ್ಲ ಪಿಎಸ್​ಎಲ್​ ಮೇಲೆ ನಿಂತಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net