IPLನಲ್ಲಿ ಪ್ರಿಯಾಂಶ್​ ಆರ್ಯ ಚೊಚ್ಚಲ, ವೇಗದ ಶತಕ! ಅನ್​ಕ್ಯಾಪ್ಡ್​ ಪ್ಲೇಯರ್​ ಪಟ್ಟಿಯಲ್ಲಿ ಈ ಸಾಧನೆಗೈದ ಆಟಗಾರರಿವರು | Priyansh

ವಿಜಯವಾಣಿ - 2025-04-08T214201.590
Published on

Priyansh Arya: ಇಂದು (ಏ.08) ಚಂಡೀಗಢ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್​ಕೆ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್​, ಅಬ್ಬರದ ಬ್ಯಾಟಿಂಗ್ ನಡೆಸಿತು. 20 ಓವರ್​ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 219 ರನ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ತಮ್ಮ ಚೊಚ್ಚಲ ಶತಕ ಬಾರಿಸಿದ ಅನ್​ಕ್ಯಾಪ್ಡ್​ ಪ್ಲೇಯರ್​ ಪ್ರಿಯಾಂಶ್​ ಆರ್ಯ, 103 ರನ್​ ಸಿಡಿಸಿ ಐಪಿಎಲ್​ ಇತಿಹಾಸದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದರು.

2ನೇ ಅತಿ ವೇಗದ ಶತಕ ದಾಖಲಿಸಿದ ಭಾರತೀಯ

ಇನ್ನು ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯುವ ಆಟಗಾರ ಪ್ರಿಯಾಂಶ್ ಆರ್ಯ ಐಪಿಎಲ್​ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ಅನ್​ಕ್ಯಾಪ್ಡ್​ ಪ್ಲೇಯರ್​ ಪಟ್ಟಿಯಲ್ಲಿ ವೇಗದ ಶತಕವನ್ನು ದಾಖಲಿಸಿದ 24 ವರ್ಷದ ಪ್ರಿಯಾಂಶ್ ಆರ್ಯ, ಇಂದಿನ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ದುಃಸ್ವಪ್ನವಾಗಿ ಕಾಡಿದರು ಎಂಬುದರಲ್ಲಿ ಅನುಮಾನವೇ ಇಲ್ಲ. ಕೇವಲ 42 ಎಸೆತದಲ್ಲಿ 103 ರನ್​ ಬಾರಿಸುವ ಮೂಲಕ ಐಪಿಎಲ್​ ಇತಿಹಾಸದ ಪುಟದಲ್ಲಿ ಪ್ರಿಯಾಂಶ್ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಐಪಿಎಲ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಬ್ಯಾಟರ್​ಗಳ ಪೈಕಿ ಕ್ರಿಸ್ ಗೇಲ್ ಹೆಸರು ಮುಂಚೂಣಿಯಲ್ಲಿದೆ. ಏಪ್ರಿಲ್ 23, 2013ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ ಗೇಲ್​, ಕೇವಲ 30 ಎಸೆತಗಳಲ್ಲಿ 100 ರನ್ ಬಾರಿಸಿ, ಆರ್​ಸಿಬಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಐಪಿಎಲ್ ಶತಕ ಸಿಡಿಸಿದ ಅನ್​ಕ್ಯಾಪ್ಡ್ ಪ್ಲೇಯರ್ಸ್​

1. ಶಾನ್ ಮಾರ್ಷ್ (PBKS) ವಿರುದ್ಧ RR, 2008

2. ಮನೀಶ್ ಪಾಂಡೆ (RCB) vs HDC, 2009

3. ಪಾಲ್ ವಾಲ್ತಾಟಿ (PBKS) vs CSK, 2009

4. ದೇವದತ್ ಪಡಿಕ್ಕಲ್ (RCB) vs RR, 2021

5. ರಜತ್ ಪಾಟಿದಾರ್ (RCB) vs LSG, 2022

6. ಯಶಸ್ವಿ ಜೈಸ್ವಾಲ್ (RR) ವಿರುದ್ಧ MI, 2022

7. ಪ್ರಭಾಸಿಮ್ರಾನ್ ಸಿಂಗ್ ವಿರುದ್ಧ ಡಿಸಿ, 2023

8. ಪ್ರಿಯಾಂಶ್ ಆರ್ಯ (PBKS) vs CSK, 2025

ಐಪಿಎಲ್‌ನಲ್ಲಿ ಅತಿ ವೇಗದ ಶತಕ

30 ಎಸೆತ, ಕ್ರಿಸ್ ಗೇಲ್ (RCB) ವಿರುದ್ಧ PWI, ಬೆಂಗಳೂರು, 2013

37 ಎಸೆತ, ಯೂಸುಫ್ ಪಠಾಣ್ (RR) ವಿರುದ್ಧ MI, ಮುಂಬೈ, 2010

38 ಎಸೆತ, ಡೇವಿಡ್ ಮಿಲ್ಲರ್ (KXIP) ವಿರುದ್ಧ RCB, ಮೊಹಾಲಿ, 2013

39 ಎಸೆತ, ಟ್ರಾವಿಸ್ ಹೆಡ್ (SRH) ವಿರುದ್ಧ RCB, ಬೆಂಗಳೂರು, 2024

39 ಎಸೆತ, ಪ್ರಿಯಾಂಶ್ ಆರ್ಯ (PBKS) ವಿರುದ್ಧ CSK, 2025 (ಅಜೇಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net