IPL ಮಿನಿ ಹರಾಜು: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಹ್ಯಾರಿ ಬ್ರೂಕ್, 13.25 ಕೋಟಿ ರೂ.ಗೆ ಬಿಕರಿ

Harry Brook
Published on

ಕೊಚ್ಚಿ: ಬಹುನಿರೀಕ್ಷಿತ ಐಪಿಎಲ್(ಇಂಡಿಯನ್​ ಪ್ರೀಮಿಯರ್​ ಲೀಗ್​) 16ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ ಮಧ್ಯಾಹ್ನ ಕೇರಳದ ಕಡಲ ತೀರ ಕೊಚ್ಚಿಯಲ್ಲಿ ನಡೆಯುತ್ತಿದ್ದು, ಬರೋಬ್ಬರಿ 13.25 ಕೋಟಿ ರೂ.ಗೆ ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ ಅವರು ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಬಿಕರಿಯಾಗಿದ್ದಾರೆ.

ಬಲಗೈ ಬ್ಯಾಟ್ಸಮ್​ ಹ್ಯಾರಿ ಬ್ರೂಕ್ ಅವರಿಗಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ತೀವ್ರ ಬಿಡ್ಡಿಂಗ್ ನಡೆಯಿತ್ತಾದರೂ ಅಂತಿಮವಾಗಿ ಸನ್ ರೈಸರ್ಸ್ ತಂಡದ ಪಾಲಾದರು.

ಎಲ್ಲ 10 ಫ್ರಾಂಚೈಸಿಗಳ ಮಾಲೀಕರು ತಮ್ಮ ತಂಡಕ್ಕೆ ಹೆಚ್ಚಿನ ಸಮತೋಲನ ತರಬಲ್ಲ ಆಟಗಾರರ ಹುಡುಕಾಟದಲ್ಲಿದ್ದು, ವಿದೇಶಿ ಆಲ್ರೌಂಡರ್​ಗಳಾದ ಬೆನ್​ ಸ್ಟೋಕ್ಸ್​, ಸ್ಯಾಮ್​ ಕರನ್​ ಮತ್ತು ಕ್ಯಾಮರಾನ್​ ಗ್ರೀನ್​ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net