ಅಭಿಮಾನಿಗೆ ಥಳಿಸಲು ಓಡಿ ಹೋದ ಪಾಕ್​ ವೇಗಿ ಹ್ಯಾರಿಸ್ ರೌಫ್! ಆಟಗಾರನ ನಡೆಗೆ ವ್ಯಾಪಕ ಆಕ್ರೋಶ

Untitled design - 2024-06-18T155615.594
Published on

ಪಾಕಿಸ್ತಾನ: ಇತ್ತೀಚೆಗಷ್ಟೇ ಐಸಿಸಿ ವಿಶ್ವಕಪ್ 2024ರ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ ಪಾಕಿಸ್ತಾನ ತಂಡ, ಮುಂದಿನ ಹಂತಕ್ಕೆ ಹೋಗುವ ಅವಕಾಶಗಳನ್ನು ಕಳೆದುಕೊಂಡು, ತವರಿಗೆ ಹಿಂತಿರುಗಿತು. ಈ ಮಧ್ಯೆ ಕ್ರಿಕೆಟ್ ಅಭಿಮಾನಿಯೊಬ್ಬನನ್ನು ಥಳಿಸಲು ಓಡಿ ಹೋದ ಪಾಕ್​ ವೇಗಿ ಹ್ಯಾರಿಸ್ ರೌಫ್ ಅವರ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ತನ್ನ ಪತ್ನಿಯೊಂದಿಗೆ ಹೋಟೆಲ್​ ಪಕ್ಕದಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ರೌಫ್, ತಂಪಾದ ಗಾಳಿಯೊಡನೆ ಪತ್ನಿಯ ಜತೆ ಮಾತನಾಡುತ್ತಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ರೌಫ್, ಏಕಾಏಕಿ ಪತ್ನಿಯಿಂದ ತಮ್ಮ ಕೈಬಿಡಿಸಿಕೊಂಡು, ಅಭಿಮಾನಿಯನ್ನು ಥಳಿಸಲು ಓಡಿ ಹೋಗಿದ್ದಾರೆ. ಸದ್ಯ ಈ ದೃಶ್ಯ ಸ್ಥಳೀಯರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೌಫ್ ಅಭಿಮಾನಿಯನ್ನು ಥಳಿಸಲು ಮುಂದಾಗಿದ್ದೇಕೆ ಎಂಬುದರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net