2ನೇ ಮಗುವಿನ ನಿರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ, ಟ್ರೋಲ್ ಮಾಡಿದ್ರು ಫ್ಯಾನ್ಸ್!

hardik web
Published on

ನವದೆಹಲಿ: ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ರೂಪದರ್ಶಿ-ನಟಿ ನತಾಶಾ ಸ್ಟಾಂಕೋವಿಕ್ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದೆ. ಕುಟುಂಬದ ಜತೆಗಿನ ಕ್ರಿಸ್‌ಮಸ್ ಪಾರ್ಟಿಯಲ್ಲಿ ನತಾಶಾ ‘ಬೇಬಿ ಬಂಪ್’ ಪ್ರದರ್ಶಿಸುವ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

28 ವರ್ಷದ ಹಾರ್ದಿಕ್ ಪಾಂಡ್ಯ 2020ರ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೆ, ಮೇನಲ್ಲಿ ನತಾಶಾ ಗರ್ಭಿಣಿಯಾಗಿರುವುದನ್ನು ಪ್ರಕಟಿಸಿದ್ದರು. ಅದೇ ವೇಳೆ ಅವರ ಸರಳ ವಿವಾಹವೂ ಬಹಿರಂಗಗೊಂಡಿತ್ತು. 2020ರ ಜುಲೈನಲ್ಲಿ ಪುತ್ರ ಅಗಸ್ತ್ಯ ಜನಿಸಿದ್ದ.

ಬರೋಡ ಆಟಗಾರ ಹಾರ್ದಿಕ್ ಸದ್ಯ ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟ್‌ನಿಂದ ದೂರವಿದ್ದಾರೆ. ಸಂಪೂರ್ಣ ಫಿಟ್ ಇಲ್ಲದಿದ್ದರೂ, ಕಳೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ಹಾರ್ದಿಕ್, ಇನ್ನು 2-3 ತಿಂಗಳ ಕಾಲ ಮರಳಿ ಕಣಕ್ಕಿಳಿಯುವುದು ಅನುಮಾನವೆನಿಸಿದೆ. 6 ವರ್ಷಗಳ ಬಳಿಕ ಮುಂಬೈ ಇಂಡಿಯನ್ಸ್‌ನಿಂದ ಹೊರಬಿದ್ದಿರುವ ಹಾರ್ದಿಕ್ ಮುಂಬರುವ ಐಪಿಎಲ್‌ನಲ್ಲಿ ಹೊಸ ತಂಡವೊಂದರ ಪರ ಆಡುವ ಸಾಧ್ಯತೆಗಳಿವೆ.

ಅಭಿಮಾನಿಗಳಿಂದ ಟ್ರೋಲ್

ಹಾರ್ದಿಕ್ 2ನೇ ಬಾರಿ ತಂದೆಯಾಗುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಭಾರಿ ಟ್ರೋಲ್ ಮಾಡಿದ್ದಾರೆ. ಈ ಮುನ್ನ ಮದುವೆಗೂ ಮೊದಲೇ ತಂದೆಯಾಗುತ್ತಿರುವ ವಿಷಯ ಬಹಿರಂಗಪಡಿಸಿದ್ದ ಇದೇ ರೀತಿ ಟ್ರೋಲ್‌ಗಳನ್ನು ಎದುರಿಸಿದ್ದ ಹಾರ್ದಿಕ್‌ರನ್ನು ಈ ಬಾರಿ ‘2ನೆಯದ್ದೂ ಬರಲು ಸಿದ್ಧವಾಯಿತೇ’ ಎಂಬ ಕಾಮೆಂಟ್‌ಗಳ ಮೂಲಕ ಕಾಲೆಳೆದಿದ್ದಾರೆ. ‘ಹಾರ್ದಿಕ್ ಭಾಯಿ ಡೆಲಿವರಿ ಬಹಳ ಬೇಗನೆ ಮಾಡಿಸುತ್ತಾರೆ’ ಎಂದೂ ತಮಾಷೆಯಿಂದ ಛೇಡಿಸಿದ್ದಾರೆ. ಇನ್ನು ಹಲವು ಅಭಿಮಾನಿಗಳು ಹಾರ್ದಿಕ್‌ಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net