More

    ಸಿನಿಮಾ ಮಂದಿರದಲ್ಲೇ ‘83’ ನೋಡಲು 4 ಪ್ರಮುಖ ಕಾರಣಗಳು…

    ನವದೆಹಲಿ: ಕಪಿಲ್ ದೇವ್ ಸಾರಥ್ಯದ ಭಾರತ ತಂಡದ 1983ರ ಏಕದಿನ ವಿಶ್ವಕಪ್ ಗೆಲುವಿನ ಯಶೋಗಾಥೆಯನ್ನು ಸಾರುವ ‘83‘ ಸಿನಿಮಾ ಶುಕ್ರವಾರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಮತ್ತು ಮೆಚ್ಚುಗೆಗಳಿಗೆ ಪಾತ್ರವಾಗಿದೆ. 38 ವರ್ಷಗಳ ಹಿಂದೆ ಭಾರತೀಯ ಕ್ರಿಕೆಟ್ ಇತಿಹಾಸ ಮತ್ತು ಚಿತ್ರಣ ಬದಲಾವಣೆಗೆ ಕಾರಣವಾಗಿದ್ದ ಲಾರ್ಡ್ಸ್ ಮೈದಾನದಲ್ಲಿನ ಈ ಸಾಧನೆ ಈ ಸಾಧನೆ ಈಗ ಬೆಳ್ಳಿತೆರೆಯ ಮೇಲೆ ಬಂದಿದೆ. ಆದರೆ ಕಳೆದ 38 ವರ್ಷಗಳಿಂದಲೂ ಎಲ್ಲ ತಲೆಮಾರಿನ ಕ್ರಿಕೆಟ್ ಪ್ರೇಮಿಗಳು ಈ ಯಶೋಗಾಥೆಯ ವಿವಿಧ ಕಥೆ-ವಿವರಗಳನ್ನು ಕೇಳುತ್ತಲೇ ಬಂದಿದ್ದಾರೆ. ಹಲವರು ಈ ಐತಿಹಾಸಿಕ ಟೂರ್ನಿಯ ರೇಡಿಯೋ ಕಾಮೆಂಟರಿಯನ್ನು ಈಗಲೂ ಮೆಲುಕು ಹಾಕುತ್ತಿರುತ್ತಾರೆ. ಹೀಗಾಗಿ ಇದರಲ್ಲಿ ವಿಶೇಷವಾದುದು ಏನಿದೆ ಎಂಬ ಗೊಂದಲವೂ ಸಹಜ. ಆದರೆ ಕಬೀರ್ ಖಾನ್ ನಿರ್ದೇಶನದ ‘83’ ಸಿನಿಮಾವನ್ನು ಸಿನಿಮಾ ಮಂದಿರದಲ್ಲಿ ನೋಡಿದರೆ ಚಂದ. ಅದು ಕ್ರಿಕೆಟ್ ಮೈದಾನಕ್ಕಿಂತ ಹೆಚ್ಚಾಗಿ ಸಿನಿಮಾ ಮಂದಿರದಲ್ಲಿ ನೀಡುತ್ತಿರುವ ವಿಶೇಷವಾದ ಆನಂದಕ್ಕೆ 5 ಪ್ರಮುಖ ಕಾರಣಗಳು ಇಲ್ಲಿವೆ.

    *ರಣವೀರ್ ಸಿಂಗ್ ನಟನೆ
    ಕಪಿಲ್ ದೇವ್ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ನಿಜಕ್ಕೂ ಸಿನಿಮಾದ ಹೀರೋ. ಕಪಿಲ್ ದೇವ್ ಅವರೇ ನಟಿಸುತ್ತಿದ್ದಾರೋ ಎಂಬಷ್ಟು ಸಹಜವಾಗಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಮುಖಚಹರೆ ಮತ್ತು ದೇಹಭಾಷೆಯ ಜತೆಗೆ ಕಪಿಲ್ ದೇವ್ ಅವರನ್ನೇ ಹೋಲುವ ಧ್ವನಿಯನ್ನು ಕೂಡ ನೀಡುವಲ್ಲಿ ರಣವೀರ್ ಯಶಸ್ಸು ಕಂಡಿದ್ದಾರೆ. ಇಂಗ್ಲಿಷ್ ಮಾತನಾಡಲು ಕಪಿಲ್ ದೇವ್ ಸ್ವಲ್ಪ ಕಷ್ಟಪಡುವುದನ್ನೂ ರಣವೀರ್ ಗಮನಿಸಿ ಅನುಕರಣೆ ಮಾಡಿದ್ದಾರೆ. ಜತೆಗೆ ತಾವೊಬ್ಬರೇ ತೆರೆಯ ಮೇಲೆ ಕೇಂದ್ರಬಿಂದುವಾಗದಂತೆ ಅವರ ಪಾತ್ರ ಮೂಡಿಬಂದಿದೆ. ಈ ಮೂಲಕ 1983ರ ಕಪಿಲ್ ಬಳಗದ ಟೀಮ್ ವರ್ಕ್‌ಅನ್ನು ಇಲ್ಲೂ ಹಿಡಿದಿಟ್ಟಿದ್ದಾರೆ.

    ತಾರಾಗಣ
    1983ರ ವಿಶ್ವಕಪ್‌ಗೆ ಸಂಬಂಧಪಟ್ಟ ಎಲ್ಲ ವ್ಯಕ್ತಿಗಳನ್ನೇ ಹೋಲುವ ಬಹುತೇಕ ಪಾತ್ರಧಾರಿಗಳನ್ನು ಸಿನಿಮಾಗೆ ತಂದಿರುವುದು ವಿಶೇಷ ಪ್ರಯತ್ನ. ಬಹುತೇಕ ಎಲ್ಲರೂ ಅದೇ ರೀತಿಯಾಗಿ ನಟಿಸಿದ್ದಾರೆ. ಪ್ರತಿಭಾನ್ವಿತ ನಟರು ಇದ್ದಾಗ ಮಾತ್ರ ಇದು ಸಾಧ್ಯ. ಯಶ್ಪಾಲ್ ಪಾತ್ರದಲ್ಲಿ ಜತಿನ್ ಸರ್ನಾ, ಶ್ರೀಕಾಂತ್ ಪಾತ್ರದಲ್ಲಿ ಜೀವಾ, ಬಲ್ವಿಂದರ್ ಸಿಂಗ್ ಸಂಧು ಪಾತ್ರದಲ್ಲಿ ಆಮ್ಮಿ ವಿರ್ಕ್, ಸುನೀಲ್ ಗಾವಸ್ಕರ್ ಪಾತ್ರದಲ್ಲಿ ತಾಹಿರ್ ಬಸಿನ್, ಮೊಹಿಂದರ್ ಅಮರ್‌ನಾಥ್ ಪಾತ್ರದಲ್ಲಿ ಸಕಿಬ್ ಸಲೀಮ್, ರೋಜರ್ ಬಿನ್ನಿ ಪಾತ್ರದಲ್ಲಿ ನಿಶಾಂತ್ ದಹಿಯಾ ಕೂಡ ಪಾತ್ರಕ್ಕೆ ಸಮರ್ಥವಾಗಿ ಜೀವ ತುಂಬಿದ್ದಾರೆ. ಟೀಮ್ ಮ್ಯಾನೇಜರ್ ಪಿಆರ್ ಮಾನ್ ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಸಾಕಷ್ಟು ಹಾಸ್ಯದ ಅಂಶಗಳನ್ನೂ ತುಂಬಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ
    2 ಗಂಟೆ 42 ನಿಮಿಷಗಳ ಸಿನಿಮಾದಲ್ಲಿ ಭಾರತ ತಂಡದ ಎಲ್ಲ ಪಂದ್ಯಗಳ ಪ್ರಮುಖ ಕ್ಷಣಗಳನ್ನು ತೋರಿಸಲಾಗಿದೆ. ಆಗಿನ ಪಂದ್ಯದ ವಿಡಿಯೋವನ್ನೇ ಇದು ಬಹುತೇಕ ಹೋಲಿಕೆಯಾಗಿದೆ. ಅದರಲ್ಲೂ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ನಿಜಕ್ಕೂ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿರುವ ಅನುಭವ ನೀಡುತ್ತದೆ. ಜತೆಗೆ ವೆಸ್ಟ್ ಇಂಡೀಸ್ ತಂಡವನ್ನು ಇಲ್ಲಿ ಖಳರಂತೆ ತೋರಿಸಿಲ್ಲ. ವಿಂಡೀಸ್ ತಂಡಕ್ಕೂ ಅರ್ಹವಾದ ಗೌರವವನ್ನು ತೋರಲಾಗಿದೆ.

    ಸಂದೇಶ
    ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು. ನಂಬಿಕೆ ಮತ್ತು ಆತ್ಮವಿಶ್ವಾಸ ಎಲ್ಲಕ್ಕಿಂತ ಮುಖ್ಯವಾದುದು. ತಂಡದ ಒಗ್ಗಟ್ಟಿನ ಬಲ ಮತ್ತು ಸೌಹಾರ್ದತೆಯನ್ನೂ ಸಿನಿಮಾ ಎತ್ತಿಹಿಡಿದಿದೆ. ನಾಯಕನೊಬ್ಬ ಸರಿಯಾಗಿದ್ದರೆ ಎಂಥ ಎದುರಾಳಿಯನ್ನೂ ಸದೆ ಬಡಿಯಬಹುದು ಎಂಬ ಸಂದೇಶವನ್ನೂ ಸಾರಿದೆ.

    ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ, ಅಶ್ವಿನ್, ಪಂತ್‌ಗೆ ದಾಖಲೆ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts