

ಕೋಲ್ಕತಾ: ಭಾರತ - ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಆಡಿರುವ ಮಾತೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಾಂಡ್ಯಾ ಈ ಹಿಂದೆಯೂ ಸಾಕಷ್ಟು ಬಾರಿ ಮೈದಾನದಲ್ಲಿ ಸಹ ಆಟಗಾರರ ಮೇಲೆ ಕೋಪ ಸಾಧಿಸಿ ಸುದ್ದಿಯಾಗಿದ್ದರು. ಬೌಲಿಂಗ್ ಹಾಗೂ ಫೀಲ್ಡಿಂಗ್ ಕಾರಣಕ್ಕೆ ಆಗಾಗ್ಗೇ ಆಟಗಾರರನ್ನು ದಿಟ್ಟಿಸಿ ನೋಡಿ ಮೈದಾನದಲ್ಲೇ ಆಕ್ರೋಶ ಹೊರ ಹಾಕುತ್ತಿದ್ದರು.
ಇದೀಗ ಹಾರ್ದಿಕ್ ಪಾಂಡ್ಯಾ ನೀರು ತಂದು ಕೊಡುವ ವಿಚಾರವಾಗಿ ಬದಲಿ ಆಟಗಾರನ ಮೇಲೆ ಮೈದಾನದಲ್ಲೇ ಅಸಭ್ಯ ಮಾತುಗಳನ್ನಾಡಿದ್ದಾರೆ. ಪಾಂಡ್ಯಾ ಬಾಯಿಂದ ಬಂದಿರುವ ಮಾತುಗಳು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದ್ದು, ಎಲ್ಲರೂ ಕೇಳಿಸಿಕೊಂಡಿದ್ದಾರೆ. ಪಾಂಡ್ಯಾ ಮಾತಿನ ವಿಡಿಯೋ ಕ್ಲಿಪ್ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಂದ್ಯದ 11ನೇ ಓವರ್ನ ಮುಕ್ತಾಯದ ವೇಳೆಗೆ ಪಾಂಡ್ಯಾ ಸಾಕಷ್ಟು ಬಾಯಾರಿದ್ದರು. ಈ ವೇಳೆ 12ನೇ ಆಟಗಾರ ನೀರು ತಂದು ಕೊಡುವುದು ತಡವಾಗಿದೆ. ಇದರಿಂದ ಸಿಟ್ಟಾದ ಪಾಂಡ್ಯಾ ಆಟಗಾರನ ಮೇಲೆ ರೇಗಾಡಿದ್ದಾರೆ. ''ಪಾನಿ ಮಂಗಾ ಥಾ ಲಾಸ್ಟ್ ಓವರ್. "ನಾನು ಕೊನೆಯ ಓವರ್‌ನಲ್ಲೇ ನೀರು ಕೇಳಿದ್ದೆ ಗಾ**... ನೀವು ನನ್ನನ್ನ ಕೊಲ್ಲುತ್ತಿದ್ದೀರಿ" (“Paani manga tha last over , g**d marwa rahe ho udhar,”)ಎಂಬರ್ಥದಲ್ಲಿ ಹಾರ್ದಿಕ್ ಪಾಂಡ್ಯಾ ಅಸಭ್ಯದ ಮಾತುಗಳನ್ನಾಡಿದ್ದಾರೆ.