ಐಪಿಎಲ್‌ನ ಹೊಸ ತಂಡ ಅಹಮದಾಬಾದ್‌ಗೆ ಹಾರ್ದಿಕ್ ಪಾಂಡ್ಯ ನಾಯಕ?

pandya web
Published on

ನವದೆಹಲಿ: ಬರೋಡ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ತಂಡದ ನಾಯಕರಾಗಿ ನೇಮಕಗೊಳ್ಳುವ ನಿರೀಕ್ಷೆ ಇದೆ. ಮುಂಬೈ ಇಂಡಿಯನ್ಸ್ ತಂಡದಿಂದ ಬಿಡುಗಡೆಗೊಂಡಿರುವ ಹಾರ್ದಿಕ್ ಅವರನ್ನು ಹರಾಜಿಗೆ ಮುನ್ನವೇ ಸೆಳೆದುಕೊಳ್ಳಲು ಅಹಮದಾಬಾದ್ ಫ್ರಾಂಚೈಸಿಯ ಮಾಲೀಕರಾಗಿರುವ ಸಿವಿಸಿ ಗ್ರೂಪ್ ಯತ್ನಿಸುತ್ತಿದೆ.

ಬೆಟ್ಟಿಂಗ್ ಕಂಪನಿ ಜತೆಗಿನ ಸಂಪರ್ಕದ ಆರೋಪದಿಂದ ಕ್ಲೀನ್‌ಚಿಟ್ ಪಡೆದಿರುವ ಸಿವಿಸಿ ಗ್ರೂಪ್, ಶೀಘ್ರದಲ್ಲೇ ಹಾರ್ದಿಕ್ ಪಾಂಡ್ಯರನ್ನು ತವರು ರಾಜ್ಯ ಗುಜರಾತ್‌ನ ತಂಡಕ್ಕೆ ನಾಯಕರಾಗಿ ಹೆಸರಿಸಲಿದೆ ಎನ್ನಲಾಗಿದೆ. ಬಿಸಿಸಿಐ ರೂಪಿಸಿರುವ ನಿಯಮದನ್ವಯ 2 ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರ (2 ಭಾರತೀಯ, 1 ವಿದೇಶಿ) ಜತೆ ಒಪ್ಪಂದ ಮಾಡಿಕೊಳ್ಳಲು ಅವಕಾಶವಿದೆ.

ಫಿಟ್ನೆಸ್ ಸಮಸ್ಯೆಯಿಂದಾಗಿ 28 ವರ್ಷದ ಹಾರ್ದಿಕ್ ಸದ್ಯ ಟೀಮ್ ಇಂಡಿಯಾದಿಂದ ಹೊರಗಿದ್ದಾರೆ. ಆಫ್ಘನ್​  ಸ್ಪಿನ್ನರ್ ರಶೀದ್ ಖಾನ್ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅಹಮದಾಬಾದ್ ತಂಡದ ಮತ್ತೆರಡು ಆಯ್ಕೆ ಆಗಿರುವ ನಿರೀಕ್ಷೆ ಇದೆ. ಮಾಜಿ ವೇಗಿ ಆಶಿಶ್ ನೆಹ್ರಾ ಈಗಾಗಲೆ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದು, ಗ್ಯಾರಿ ಕರ್ಸ್ಟನ್ ಮೆಂಟರ್ ಆಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net